ವಿದೇಶಿ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 26 ಪೈಸೆ ಏರಿಕೆಯಾಗಿ 44.57 ರೂಪಾಯಿಗಳಿಗೆ ತಲುಪಿದೆ.
ಅದನ್ನು ಹೊರತುಪಡಿಸಿ, ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳ ಮತ್ತು ಶೇರುಪೇಟೆಗಳ ದುರ್ಬಲ ವಹಿವಾಟಿನಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಅಲ್ಪ ಚೇತರಿಕೆ ಕಂಡು 44.31/32 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 26 ಪೈಸೆ ಏರಿಕೆಯಾಗಿ 44.57 ರೂಪಾಯಿಗಳಿಗೆ ತಲುಪಿದೆ.
ಏತನ್ಮದ್ಯೆ, ಮುಂಬೈ ಶೇರುಪೇಟೆಯಲ್ಲಿ ಸೂಚ್ಯಂಕ 113.34 ಪಾಯಿಂಟ್‌ಗಳ ಕುಸಿತ ಕಂಡು 20,475.75 ಅಂಕಗಳಿಗೆ ತಲುಪಿದೆ.