ಭಾರತೀಯ ರಿಸರ್ವ್ ಬ್ಯಾಂಕ್ 2011ರ ಆರಂಭದಲ್ಲಿ, ರೆಪೋ ದರಗಳಲ್ಲಿ 75 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮಧ್ಯ ಮಾರ್ಚ್‌ನಿಂದ ಆರ್‌ಬಿಐ ಹಣದುಬ್ಬರವನ್ನು ನಿಯಂತ್ರಿಸಲು, 150 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಘೋಷಿಸಿದೆ.ಸದ್ಯದಲ್ಲಿಯೇ ಮತ್ತೊಂದು ರೆಪೋ ದರಗಳ ಏರಿಕೆ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಹಣದುಬ್ಬರ ದರ ಆರ್‌ಬಿಐ ನಿಗದಿತ ದರ ಮಾರ್ಚ್ ವೇಳೆಗೆ ಶೇ.6ಕ್ಕಿಂತ ಕಡಿಮೆಯಾದಲ್ಲಿ ಕೂಡಾ, ರೆಪೋ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಕೌಶಿಕ್ ದಾಸ್ ತಿಳಿಸಿದ್ದಾರೆ.
ಪ್ರಸ್ತುತ, ಭಾರತೀಯ ರಿಸರ್ವ್ ಬ್ಯಾಂಕ್ ಶೇ.6.25ಕ್ಕೆ ರೆಪೋ ದರವನ್ನು ನಿಗದಿಪಡಿಸಿದೆ. ರಿವರ್ಸ್ ರೆಪೋ ದರ ಷೇ.5.25ಕ್ಕೆ ಸ್ಥಿರವಾಗಿಸಿದೆ.