ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯನ್ಸ್ ಪವರ್ ನಿವ್ವಳ ಲಾಭದಲ್ಲಿ ಶೇ.21ರಷ್ಟು ಹೆಚ್ಚಳ (Reliance Power | Anil Ambani group)
Bookmark and Share Feedback Print
 
ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ಪವರ್, ಸೆಪ್ಟೆಂಬರ್ 30ಕ್ಕೆ ಮೊದಲ ತ್ರೈಮಾಸಿಕ ಅವಧಿಯ ಅಂತ್ಯಕ್ಕೆ ನಿವ್ವಳ ಲಾಭದಲ್ಲಿ ಶೇ.21ರಷ್ಟು ಏರಿಕೆಯಾಗಿದ್ದು, 235 ಕೋಟಿ ರೂಪಾಯಿಗಳಿಗೆ ತಲುಪಿದೆ.

ರಿಲಯನ್ಸ್ ಪವರ್, ಕಳೆದ ವರ್ಷದ ಇದೇ ಅವಧಿಯಲ್ಲಿ 194 ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿತ್ತು ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.

ಕಳೆದ ವರ್ಷದ ಅವಧಿಯಲ್ಲಿ 246 ಕೋಟಿ ರೂಪಾಯಿ ನಿವ್ವಳ ಆದಾಯಗಳಿಸಿದ್ದ ಕಂಪೆನಿ, ಪ್ರಸಕ್ತ ವರ್ಷದ ಅವದಿಯಲ್ಲಿ ನಿವ್ವಳ ಆದಾಯದಲ್ಲಿ ದ್ವಿಗುಣವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮುಂಬೈ ಶೇರುಪೇಟೆಯಲ್ಲಿ ಶೇರು ದರ 181.90 ರೂಪಾಯಿಗಳಿಗೆ ಅಂತ್ಯವಾಗಿದ್ದು, ತಲಾ ಶೇರುದಲ್ಲಿ ಶೇ.3.55 ರಷ್ಟು ಕುಸಿತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ