ಬ್ಯಾಂಕ್‌ಗಳು ಸಾಲದ ಶುಲ್ಕವನ್ನು ಮುಚ್ಚಿಡುವಂತಿಲ್ಲ:ಆರ್ಬಿಐ
ಮುಂಬೈ, ಶನಿವಾರ, 13 ನವೆಂಬರ್ 2010( 11:25 IST )
ಬ್ಯಾಂಕ್‌ಗಳು ಗ್ರಾಹಕರಿಗೆ ನೀಡುವ ಸಾಲಕ್ಕೆ ಕಾಣದ ಬಡ್ಡಿ ದರಗಳನ್ನು ವಿಧಿಸುವುದು ಸೂಕ್ತವಲ್ಲ. ಗ್ರಾಹಕರಿಗೆ ಸಂಪೂರ್ಣ ವಿವರಗಳನ್ನು ನೀಡುವುದು ಬ್ಯಾಂಕ್‌ಗಳ ಕರ್ತವ್ಯವಾಗಿದೆ ಎಂದುಪ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.
ಬ್ಯಾಂಕ್‌ಗಳು ಗ್ರಹಾಕರಿಗೆ ಸಾಲವನ್ನು ಮಂಜೂರು ಮಾಡುವಾಗ, ಪಾರದರ್ಶಕವಾಗಿ, ಅಗತ್ಯವಾದ ವೆಚ್ಚಗಳ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರು ಕೂಡಾ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯುವಾಗ , ಸಂಪೂರ್ಣ ವಿವರಗಳನ್ನು ಪಡೆದು ಮುಂದುವರಿಯಬೇಕು. ಇಲ್ಲವಾದಲ್ಲಿ ಅನಗತ್ಯ ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂದು ತಿಳಿಸಿದೆ.
ಬ್ಯಾಂಕ್‌ಗಳು ಕಾಣದ ಬಡ್ಡಿದರಗಳನ್ನು ವಿಧಿಸಿ, ಗ್ರಾಹಕರಿಂದ ವಸೂಲಿ ಮಾಡುವುದು ಕಾನೂನುಭಾಹಿರವಾಗಿದ್ದು, ಅಂತಹ ಬ್ಯಾಂಕ್‌ಗಳ ವಿರುದ್ಧ ಕಠಿಣ ಕರ್ಮ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.