ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ದೇಶಿಯ ಮಾರಕುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಕೂಡಾ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚೀನಾ ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಬಡ್ಡಿ ದರಗಳಲ್ಲಿ ಏರಿಕೆ ಘೋಷಿಸುವ ಸಾಧ್ಯತೆಗಳಿದ್ದು ಉಕ್ಕು ದರಗಳಲ್ಲಿ ಏರಿಕೆಯಾಗುವ ನಿರೀಕ್ಷೆಗಳಿಂದಾಗಿ ಹೂಡಿಕೆದಾರರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 40 ಡಾಲರ್‌ಗಳ ಇಳಿಕೆ ಕಂಡು 1,368.80 ಡಾಲರ್‌ಗಳಾಗಿದೆ.
ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 90 ರೂಪಾಯಿಗಳ ಕುಸಿತವಾಗಿ 20,440 ರೂಪಾಯಿಗಳಿಗೆ ತಲುಪಿದೆ.