ವಿಮಾ ಕಂಪೆನಿಗಳ ನಿಯಂತ್ರಕ ಐಆರ್‌ಡಿಎ ಸಂಸ್ಥೆಗೆ ಸಾಫ್ಟ್‌ವೇರ್ ತಂತ್ರಜ್ಞಾನದ ಗುತ್ತಿಗೆ ಹಕ್ಕನ್ನು ಮಾಹಿತಿ ತಂತ್ರಜ್ಞಾನ ಸಂಸ್ಥೆ ಮಹೀಂದ್ರಾ ಸತ್ಯಂ ಪಡೆದುಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮಹೀಂದ್ರಾ ಸತ್ಯಂ ಕಂಪೆನಿ ಐಆರ್‌ಡಿಎ ಸಂಸ್ಥೆಗೆ ಬಿಜಿನೆಸ್ ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸುತ್ತಿರುವುದರಿಂದ ಅನಗತ್ಯ ವೆಚ್ಚದಲ್ಲಿ ಇಳಿಕೆಯಾಗುತ್ತದೆ.ಹಲವಾರು ಸೌಲಭ್ಯಗಳು ದೊರೆಯಲಿವೆ ಎಂದು ಮಹೀಂದ್ರಾ ಸತ್ಯಂ ಸಂಸ್ಥೆ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಏತನ್ಮಧ್ಯೆ, ಮಹೀಂದ್ರಾ ಸತ್ಯ ಕಂಪೆನಿ, ಗುತ್ತಿಗೆ ಪಡೆದ ವಿವರಗಳನ್ನು ಬಹಿರಂಗಪಡಸಲು ನಿರಾಕರಿಸಿದೆ,
ಮುಂಬೈ ಶೇರುಪೇಟೆಯಲ್ಲಿ ಮಹೀಂದ್ರಾ ಸತ್ಯಂ ಶೇರುಗಳಲ್ಲಿ ಶೇ.1.40 ರಷ್ಟು ಏರಿಕೆ ಕಂಡು 88.15 ರೂಪಾಯಿಗಳಿಗೆ ತಲುಪಿದೆ.