ಭಾರತ ಮತ್ತು ಕೆನಡಾ ನಡುವೆ ಮುಕ್ತ ವ್ಯಾಪಾರ ನೀತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತೀಯ ಸರಕುಗಳು ಕೆನಡಾ ಮಾರುಕಟ್ಟೆಯಲ್ಲಿ ಇನ್ಮುಂದೆ ಅಗ್ಗದ ದರದಲ್ಲಿ ದೊರೆಯಲಿದೆ.
ಭಾರತ ಮತ್ತು ಕೆನಡಾದ ಪ್ರಧಾನಮಂತ್ರಿಗಳು ಉಭಯ ದೇಶಗಳ ಆರ್ಥಿಕ ವ್ಯವಸ್ಥೆಯಲ್ಲಿ ಭಾಗಿದಾರರಾಗುವ ನಿಟ್ಟಿನಲ್ಲಿ ಮುಕ್ತ ಆರ್ಥಿಕ ನೀತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಈ ಒಪ್ಪಂದದ ಮೂಲಕ ಉಭಯ ದೇಶಗಳ ನಡುವಿನ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ತಿಳಿಸಿದ್ದಾರೆ. ಉಭಯ ದೇಶಗಳ ವ್ಯಾಪಾರ ಒಪ್ಪಂದದಿಂದಾಗಿ ಮುಂದಿನ ಐದು ವರ್ಷಗಳಲ್ಲಿ 4.2 ಬಿಲಿಯನ್ ಡಾಲರ್ ವಹಿವಾಟು ನಡೆಯಲಿದೆ.
ಇದರಲ್ಲಿ ಮುಖ್ಯವಾಗಿ ಕೆನಡಾದಿಂದ ಭಾರತಕ್ಕೆ ರಫ್ತಾಗಲಿರುವ ಮೆಶಿನರಿ, ಫರ್ಟಿಲೈಜರ್, ವೆಜಿಟೇಬಲ್. ಅದೇ ರೀತಿ ಭಾರತದಿಂದ ಕೆನಡಾಕ್ಕೆ ಗಾರ್ಮೆಂಟ್ಸ್, ಮೆಟಲ್ಸ್, ಚಿನ್ನಾಭರಣ, ಪ್ರಿಸಿಯಸ್ ಸ್ಟೋನ್ಸ್ ಹಾಗೂ ಎಲೆಕ್ಟ್ರೋಲ್ ಇಕ್ಯುಪ್‌ಮೆಂಟ್ಸ್ ರಫ್ತು ಮಾಡಲಿದೆ. ಇದೀಗ ಎರಡು ದೇಶಗಳು ಮುಕ್ತ ವ್ಯಾಪಾರ ನೀತಿಗೆ ಸಹಿ ಹಾಕಿದ ಪರಿಣಾಮ ಕೆನಡಾ ಮಾರುಕಟ್ಟೆಯಲ್ಲಿ ಭಾರತದ ವಸ್ತುಗಳು ಅಗ್ಗವಾಗಿ ದೊರೆಯಲಿದೆ.