ನವದೆಹಲಿ: ತನ್ನ ಒಪ್ಪಿಗೆ ಪಡೆಯದೆ ತನಗೆ ಸಂಬಂಧಿಸಿದ ಸೇವೆಯನ್ನು ನೀಡಲು ಮುಂದಾಗಿರುವ ಭಾರ್ತಿ ಏರ್ಟೆಲ್ ವಿರುದ್ಧ ಬಾಲಿವುಡ್ ಬಿಗ್ಬಿ ಅಮಿತಾಬ್ ಬಚ್ಚನ್ ಕಿಡಿ ಕಾರಿದ್ದಾರೆ. ತನ್ನ ಗ್ರಾಹಕರು ಅಮಿತಾಬ್ ಜತೆ ಉಚಿತವಾಗಿ ಮಾತನಾಡಬಹುದು ಎಂಬ ನೂತನ ಆಫರ್ ಏರ್ಟೆಲ್ ನೀಡಿತ್ತು. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಚ್ಚನ್ ಹೇಳಿದ್ದಾರೆ.