2,500 ಕೋಟಿ ಠೇವಣಿ
ನವದೆಹಲಿ: ಹಚ್ ಸಂಸ್ಥೆಯನ್ನು ತೆಕ್ಕೆಗೆ ತೆಗೆದುಕೊಂಡ ನಂತರ ಉದ್ಭವಿಸಿದ ತೆರಿಗೆ ವಿವಾದಕ್ಕೆ ಸಂಬಂಧಪಟ್ಟಂತೆ ಬಾಂಬೆ ಹೈಕೋರ್ಟ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿರುವ ವೊಡಾಫೋನ್ ಪ್ರಕರಣ ವಿಚಾರಣೆ ನಡೆಸಲು 2,500 ಕೋಟಿ ರೂಪಾಯಿಗಳನ್ನು ಠೇವಣಿ ಇಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಇದಕ್ಕೆ ಡಚ್ ದೂರವಾಣಿ ಸಂಸ್ಥೆ ಒಪ್ಪಿಗೆ ಸೂಚಿಸಿದೆ.