ರೂಪಾಯಿ 7 ಪೈಸೆ ಕುಸಿತ
ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮಂಗಳವಾರ ತನ್ನ ವಹಿವಾಟನ್ನು ಏಳು ಪೈಸೆ ಕುಸಿತದೊಂದಿಗೆ ಮುಕ್ತಾಯಗೊಳಿಸಿದೆ. ದೇಶೀಯ ಶೇರುಗಳ ಕುಸಿತದಿಂದಾಗಿ ರೂಪಾಯಿ ಡಾಲರ್ ಎದುರು 45.31 ಪೈಸೆಗಳಿಗೆ ಹಿನ್ನಡೆ ಕಂಡಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.