ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಸ್ಲಿಂ ವಿಜ್ಞಾನಿ ವಿವಾದಿತ ವೊಡಾಫೋನ್ ಜಾಹೀರಾತು ರದ್ದು (Vodafone | Muslim scientist | Egypt | Abbas Ibn Firnas)
Bookmark and Share Feedback Print
 
ಆದಿಕಾಲದ ಮುಸ್ಲಿಂ ವಿಜ್ಞಾನಿಯೊಬ್ಬರನ್ನು ಅವಹೇಳನ ಮಾಡುವ ರೀತಿಯಲ್ಲಿ ಈಜಿಪ್ತ್‌ನಲ್ಲಿ ಮೂಡಿ ಬಂದಿರುವ ಜಾಹೀರಾತಿಗೆ ಭಾರೀ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಖಾಸಗಿ ದೂರವಾಣಿ ಕ್ಷೇತ್ರದ ದೈತ್ಯ ವೊಡಾಫೋನ್ ಅದನ್ನು ಹಿಂದಕ್ಕೆ ಪಡೆದುಕೊಂಡಿದೆ.

ಮುಸ್ಲಿಂ ವಿಜ್ಞಾನಿ ಅಬ್ಬಾಸ್ ಐಬಿಎನ್ ಫಿರ್ನಾಸ್ ಎಂಬವರನ್ನು ವೊಡಾಫೋನ್ ತನ್ನ ಜಾಹೀರಾತಿನಲ್ಲಿ ಅಣಕ ಮಾಡಿತ್ತು ಎಂದು ಆರೋಪಿಸಲಾಗಿತ್ತು.

ಐತಿಹಾಸಿಕ ಇಸ್ಲಾಮಿಕ್ ನಾಯಕನಿಗೆ ಜಾಹೀರಾತಿನಲ್ಲಿ ಅಪಮಾನ ಎಸಗಲಾಗಿದೆ ಎಂದು ವೀಕ್ಷಕರು ಸಾಮಾಜಿಕ ಸಂಪರ್ಕತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರುಗಳಲ್ಲಿ ದೂರುಗಳನ್ನು ನೀಡಲಾರಂಭಿಸಿದ ನಂತರ ಬ್ರಿಟನ್ ಮೂಲದ ಕಂಪನಿ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಕ್ರಿಸ್ತಶಕ 810-887ರವರೆಗೆ ಬದುಕಿದ್ದ ಅಬ್ಬಾಸ್ ಎಂಬ ಮುಸ್ಲಿಂ ವಿಜ್ಞಾನಿಯನ್ನು ಹೋಲುವ ವ್ಯಕ್ತಿಯನ್ನು ಜಾಹೀರಾತಿನಲ್ಲಿ ತೋರಿಸಲಾಗಿತ್ತು. ಆ ವ್ಯಕ್ತಿ ರೆಕ್ಕೆಗಳನ್ನು ಕಟ್ಟಿಕೊಂಡು ಹಾರಲು ಯತ್ನಿಸಿ ವಿಫಲನಾಗುತ್ತಾನೆ. ಈ ಸಂದರ್ಭದಲ್ಲಿ ಅಲ್ಲಿಗೆ ಬರುವ ಮೂವರು ವ್ಯಕ್ತಿಗಳು, ಇಂಟರ್ನೆಟ್‌ನಲ್ಲಿ ಈ ಬಗ್ಗೆ ಮಾಹಿತಿಗಳನ್ನು ಜಾಲಾಡುವಂತೆ ಸಲಹೆ ನೀಡುತ್ತಾರೆ -- ಈ ದೃಶ್ಯವನ್ನು ಜಾಹೀರಾತು ಹೊಂದಿತ್ತು.

ಸಾವಿರ ವರ್ಷಗಳ ಹಿಂದೆ ನಿಧನರಾಗಿದ್ದ ವಿಜ್ಞಾನಿ ಅಬ್ಬಾಸ್ ವೈಮಾನಿಕ ಕಲ್ಪನೆಯನ್ನು ಸಾಕಾರಗೊಳಿಸಲು ಭಾರೀ ಯತ್ನ ನಡೆಸಿದ್ದರು. ಅವರು ರೆಕ್ಕೆಗಳನ್ನು ಕಟ್ಟಿಕೊಂಡು ಎತ್ತರ ಪ್ರದೇಶದಿಂದ ಕೆಳಗೆ ಹಾರಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಒಮ್ಮೆ ತೀವ್ರ ಗಾಯಗೊಂಡಿದ್ದರು ಎಂದು ಹೇಳಲಾಗಿದೆ. ಇದನ್ನೇ ವೊಡಾಫೋನ್ ತನ್ನ ಯುಎಸ್‌ಬಿ ಇಂಟರ್ನೆಟ್ ಜಾಹೀರಾತಿನಲ್ಲಿ ಅಳವಡಿಸಲು ಮುಂದಾಗಿತ್ತು.

ಈ ಜಾಹೀರಾತು ಅಪಮಾನಕಾರಿಯಾಗಿದೆ ಎಂದು ನಮ್ಮ ಕೆಲವು ಗ್ರಾಹಕರು ದೂರು ನೀಡಿರುವುದರಿಂದ ಅದನ್ನು ಯೂಟ್ಯೂಬ್ ಮತ್ತು ನಮ್ಮ ಫೇಸ್‌ಬುಕ್ ಫ್ಯಾನ್ಸ್ ಪುಟದಿಂದ ತೆಗೆಯಲು ನಿರ್ಧರಿಸಿದ್ದೇವೆ. ಈದ್ ರಜಾದಿನಗಳಿರುವುದರಿಂದ ಟಿವಿ ಚಾನೆಲ್‌ಗಳಿಗೆ ನೀಡಿರುವ ಜಾಹೀರಾತುಗಳನ್ನು ತಕ್ಷಣಕ್ಕೆ ಹಿಂದಕ್ಕೆ ಪಡೆಯಲು ಅಸಾಧ್ಯವಾಗುತ್ತಿದೆ ಎಂದು ಕಂಪನಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ