ಮುಂದಿವ ವರ್ಷ ಶೇಕಡಾ 9ರ ಆರ್ಥಿಕ ವೃದ್ಧಿ ದರವನ್ನು ಸಾಧಿಸಲಿದ್ದೇವೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎಚ್‌ಟಿ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಈ ರೀತಿಯಾಗಿ ನುಡಿದರು.
ಜಾಗತಿಕವಾಗಿ ಕಾಡಿದ ಆರ್ಥಿಕ ಹಿಂಜರಿತದ ಶೀಘ್ರದಲ್ಲಿ ಚೇತರಿಸಿಕೊಂಡ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಕಳೆದ ವರ್ಷದಲ್ಲಿ 7.4 ಆರ್ಥಿಕ ವೃದ್ಧಿ ದರ ಸಾಧಿಸಿದ ನಾವು ಪ್ರಸಕ್ತ ಹಣಕಾಸು ಅವಧಿಯಲ್ಲಿ ಶೇಕಡಾ 8.5ನ್ನು ತಲುಪುವ ವಿಶ್ವಾಸದಲ್ಲಿದ್ದೇವೆ. ಮುಂದಿನ ವರ್ಷ ಇದು ಶೇಕಡ 9 ಆಗಲಿದೆ ಎಂಬ ಭರವಸೆಯಿದೆ ಎಂದವರು ತಿಳಿಸಿದರು.
ಮುಂಬರುವ ವರ್ಷಗಳಲ್ಲಿ ಶೀಘ್ರ ಪ್ರಗತಿಯನ್ನು ಸಾಧಿಸಲಿದ್ದೇವೆ. ಇದಕ್ಕೆ ಬೇಕಾದ ಎಲ್ಲಾ ಹಕಕಾಸು ನೀತಿಗಳನ್ನು ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.