ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟು ಹಾಗೂ ಮದುವೆ ಸೀಜನ್ ಹಿನ್ನೆಲೆಯಲ್ಲಿ, ಇಂದಿನ ಆರಂಭಿಕ ವಹಿವಾಟಿನಲ್ಲಿ ಬೆಳ್ಳಿಯ ದರದಲ್ಲಿ ದಾಖಲೆಯ 400 ರೂಪಾಯಿಗಳ ಏರಿಕೆಯಾಗಿ ಪ್ರತಿ ಕೆಜಿಗೆ 42,400 ರೂಪಾಯಿಗಳಿಗೆ ತಲುಪಿದೆ.
ಚಿನ್ನಾಭರಣ ತಯಾರಕರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿ, ಪ್ರತಿ 10ಗ್ರಾಂಗೆ 70 ರೂಪಾಯಿಗಳ ಏರಿಕೆಯಾಗಿ 20,430 ರೂಪಾಯಿಗಳಿಗೆ ತಲುಪಿದೆ.
ಮದುವೆ ಸೀಜನ್ ಹಾಗೂ ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಚಿನ್ನ ಮತ್ತು ಬೆಳ್ಳಿಯ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ ಶೇ.0.7ರಷ್ಟು ಏರಿಕೆಯಾಗಿ 1,361 ಡಾಲರ್‌ಗಳಿಗೆ ತಲುಪಿದೆ.