ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಿಸಾನ್ ಇಂಡಿಯಾದಿಂದ ಫೀಲ್ಡ್ ಕ್ವಾಲಿಟಿ ಸೆಂಟರ್ ಆರಂಭ (Nissan Motor India | Training Centre | Field Quality Centre | Kiminobu Tokuyama)
ನಿಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎನ್‌ಎಂಐಪಿಎಲ್),ನಗರದ ಒರಾಗ್‌ಡಮ್‌ನಲ್ಲಿರುವ ಘಟಕದಲ್ಲಿ ಫೀಲ್ಡ್ ಕ್ವಾಲಿಟಿ ಸೆಂಟರ್ ಮತ್ತು ತರಬೇತಿ ಕೇಂದ್ರವನ್ನು ಆರಂಭಿಸಿದೆ.
ನಿಸಾನ್ ಮೋಟಾರ್ ಸಂಸ್ಥೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವುದರಿಂದ, ಗ್ರಾಹಕರಿಗೆ ತೃಪ್ತಿ ನೀಡುವ ವಾಹನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.ತರಬೇತಿ ಕೇಂದ್ರದಲ್ಲಿ ನಿಸಾನ್ ಗ್ಲೋಬಲ್ ಸ್ಟ್ಯಾಂಡರ್ಡ್ಸ್ ಅನ್ವಯ ತರಬೇತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಸಾನ್ ಮೋಟಾರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಕಿಮಿನೊಬು ಟುಕುಯಾಮಾ ಮಾತನಾಡಿ, ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ ವಾಹನಗಳನ್ನು ನೀಡುವುದು ನಿರಂತರವಾಗಿ ಮುಂದುವರಿಯಲಿದೆ. ಫೀಲ್ಡ್ ಕ್ವಾಲಿಟಿ ಸೆಂಟರ್ ಹಾಗೂ ತರಬೇತಿ ಕೇಂದ್ರವನ್ನು ಆರಂಭಿಸುವುದರಿಂದ ಸಿಬ್ಬಂದಿಗೆ ಪರಿಣಿತಿಯನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
PTI
ಫೀಲ್ಡ್ ಕ್ವಾಲಿಟಿ ಇಂಪ್ರೂವ್‌ಮೆಂಟ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಹಿರೋಶಿ ಯುಕಿನರಿ ಮಾತನಾಡಿ, ಜಾಗತಿಕ ಗುಣಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ಅಗತ್ಯವಾಗಿರುವುದರಿಂದ, ಘಟಕಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹೆಚ್ಚಿನ ತರಬೇತಿಯನ್ನು ನೀಡುವುದು ಅಗತ್ಯವಾಗಿದೆ. ವಿಶ್ವದಲ್ಲಿ ಸಂಸ್ಥೆ, ಇಂತಹ ಏಳು ಘಟಕಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ತರಬೇತಿ ಕೇಂದ್ರವನ್ನು 1,500 ಚದುರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಮೂರು ಬೃಹತ್ ತರಬೇತಿ ಕೋಣೆಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು, ಕಾನ್ಫರೇನ್ಸ್ ಕೋಣೆಗಳನ್ನು ಹೊಂದಿದ್ದು,ನಿಸಾನ್ ಕಂಪೆನಿಯ ಗ್ಲೋಬಲ್ ಸ್ಟ್ಯಾಂಡರ್ಡ್‌ಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
ತರಬೇತಿ ಕೇಂದ್ರದೊಂದಿಗೆ, ಗ್ರಾಹಕರನ್ನು ಆಕರ್ಷಿಸುವ ಜಾಣ್ಮೆ, ಗ್ರಾಹಕ ವ್ಯವಹಾರಗಳ ಕುರಿತಂತೆ ತರಬೇತಿ ಮತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ನಿಸಾನ್ ಕಂಪೆನಿಯ ಮೂಲಗಳು ತಿಳಿಸಿವೆ.