ಟಾಟಾ ಟೆಲಿ ಸರ್ವಿಸಸ್ನ ಮೊಬೈಲ್ ಆಪರೇಟರ್ ಸಂಸ್ಥೆಯಾದ ಟಾಟಾ ಡೋಕೋಮೋ ಅಂತಿಮವಾಗಿ 3ಜಿ ಸೇವೆಗಳನ್ನು ಆರಂಭಿಸಿದೆ.
3ಜಿ ಸೇವೆಗಳಿಂದಾಗಿ ಮೊಬೈಲ್ ಬಳಕೆದಾರರು ಬಹು ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಟಾಟಾ ಟೆಲಿ ಸರ್ವಿಸಸ್ ಲಿಮಿಟೆಡ್ನ ಅದ್ಯಕ್ಷ ಪಂಕಜ್ ಸೇಠಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
3ಜಿ ಸೇವಾ ಸಂಪರ್ಕದಿಂದಾಗಿ ಬಳಕೆದಾರರು ಹೈ-ಸ್ಪೀಡ್ ಇಂಟರ್ನೆಟ್(21.1ಎಂಬಿಪಿಎಸ್) ಸೇರಿದಂತೆ ಇತರ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ವಿವರಣೆ ನೀಡಿದ್ದಾರೆ.
ಕಂಪೆನಿ ಎಂದಿನಂತೆ ದರ ಸಮರವನ್ನು ಮುಂದುವರಿಸಿದ್ದು, ಸ್ಮಾಲ್ ಸ್ಕ್ರೀನ್ ಪ್ಲ್ಯಾನ್ ಮತ್ತು ಲಾರ್ಜ್ ಸ್ಕ್ರೀನ್ ಪ್ಲ್ಯಾನ್ ಜಾರಿಗೊಳಿಸಿದ್ದು, 750 ರೂಪಾಯಿಗಳಿಗೆ 5000 ನಿಮಿಷ ಉಚಿತ ಕರೆಗಳನ್ನು ಮಾಡಬಹುದಾಗಿದೆ.