ಭಾರತದ ಹಣಪಾವತಿ ಕ್ಷೇತ್ರ ನೂತನ ಸೇವಾ ಕ್ರಾಂತಿಗೆ ಸಜ್ಜುಗೊಳ್ಳುತ್ತಿದೆ. ಗ್ರಾಹಕರು ಇದೀಗ ತಮ್ಮ ಖಾತೆಯಿಂದ ಇತರರ ಯಾವುದೇ ಖಾತೆಗೆ ಮೊಬೈಲ್ ಬಳಸಿ ಹಣ ವರ್ಗಾವಣೆಯನ್ನು ಮಾಡಬಹುದಾಗಿದೆ.
ಗ್ರಾಹಕರು, ನ್ಯಾಷನಲ್ ಪೇಮೆಂಟ್ ಕಾರ್ಪೋರ್ಶನ್ ಆಫ್ ಇಂಡಿಯಾದ ಇಂಟರ್-ಬ್ಯಾಂಕ್ ಮೊಬೈಲ್ ಪೇಮೆಂಟ್ ಸರ್ವಿಸ್ ಬಳಸಿಕೊಂಡು ಹಣವನ್ನು ಇತರರ ಖಾತೆಗೆ ವರ್ಗಾಯಿಸಬಹುದಾಗಿದೆ.
ನ್ಯಾಷನಲ್ ಪೇಮೆಂಟ್ ಕಾರ್ಪೋರ್ಶನ್ ಆಫ್ ಇಂಡಿಯಾ ಸಂಸ್ಥೆ, ಅನೇಕ ಬ್ಯಾಂಕ್‌ಗಳನ್ನೊಳಗೊಂಡ ಮಾತೃಸಂಸ್ಥೆಯಾಗಿದ್ದು, ರಿಟೇಲ್ ಪೇಮೆಂಟ್ ಸಿಸ್ಟಮ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಮೊಬೈಲ್ ಬಳಸಿ ಹಣ ವರ್ಗಾವಣೆ ಮಾಡುವ ವ್ಯವಸ್ಥೆ, ನೆಟ್-ಬ್ಯಾಂಕಿಂಗ್ ಸೌಲಭ್ಯದಂತೆ ಸುರಕ್ಷಿತವಾಗಿದೆ. ಐಎಂಪಿಎಸ್‌ನ ಪ್ರಮುಖ ಉಪಯೋಗವೆಂದರೆ, ಬಳಕೆದಾರರು ಕಂಪ್ಯೂಟರ್ ಅಥವಾ ಇಂಟರ್‌ನೆಟ್-ಸೌಲಭ್ಯ ಹೊಂದಿರುವ ಮೊಬೈಲ್‌ಗಳನ್ನು ಬಳಸುವ ಅಗತ್ಯವಿಲ್ಲ.
ಇಲ್ಲಿಯವರೆಗೆ, ಹಣವನ್ನು ಕಳುಹಿಸುವವರ ಅಥವಾ ಸ್ವೀಕರಿಸುವವರ ಖಾತೆ ಒಂದೇ ಬ್ಯಾಂಕ್‌ನಲ್ಲಿದ್ದಲ್ಲಿ ಮಾತ್ರ, ಮೊಬೈಲ್ ಬಳಸಿ ಹಣವನ್ನು ವರ್ಗಾಯಿಸಬಹುದಾಗಿತ್ತು.
ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಪಿ. ಹೊಟಾ ಮಾತನಾಡಿ, ಭಾರತದಲ್ಲಿ ಮೊದಲ ಬಾರಿಗೆ ಇಂತಹ ಸೌಲಭ್ಯ ಜಾರಿಗೆ ಬರುತ್ತಿದೆ. 24x7 ಗಂಟೆಗಳ ಅವಧಿಯಲ್ಲಿ ಮೊಬೈಲ್ ಬಳಸಿ ಹಣವನ್ನು ವರ್ಗಾಯಿಸಬಹುದಾಗಿದೆ.
ಇಲ್ಲಿಯವರೆಗೆ ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್ ,ಎಕ್ಸಿಸ್ ಮತ್ತು ಎಸ್‌ಬಿಐ ಬ್ಯಾಂಕ್‌ಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್‌ಗಳು ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇತರ 29 ಬ್ಯಾಂಕ್‌ಗಳು ಕೂಡಾ ಶೀಘ್ರದಲ್ಲಿ ನೆಟ್‌ವರ್ಕ್‌ಗೆ ಸೇರ್ಪಡೆಯಾಗಲಿವೆ ಎಂದು ತಿಳಿಸಿದ್ದಾರೆ.