ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟು ಹಾಗೂ ಮದುವೆ ಸೀಜನ್ ಹಿನ್ನೆಲೆಯಲ್ಲಿ, ಚಿನ್ನದ ಸಂಗ್ರಹಕಾರರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಚಿನ್ನದ ದರ ಪ್ರತಿ 10 ಗ್ರಾಂಗೆ 170 ರೂಪಾಯಿಗಳ ಏರಿಕೆಯಾಗಿ 20,600 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಶೇರುಪೇಟೆಗಳ ತೊಳಲಾಟದಿಂದಾಗಿ, ಚಿನ್ನದ ಸಂಗ್ರಹಕಾರರು, ಹೂಡಿಕೆದಾರರು ಮತ್ತು ಆಭರಣಗಳ ತಯಾರಕರಿಂದ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 12.30 ಡಾಲರ್‌ಗಳಷ್ಟು ಏರಿಕೆಯಾಗಿ 1,366.40 ಡಾಲರ್‌ಗಳಿಗೆ ತಲುಪಿದೆ.
ಕೈಗಾರಿಕೇದ್ಯಮ ಕ್ಷೇತ್ರದ ಬೇಡಿಕೆ ಹೆಚ್ಚಳದಿಂದಾಗಿ, ಬೆಳ್ಳಿಯ ದರ ಪ್ರತಿ ಕೆಜಿಗೆ 42,400 ರೂಪಾಯಿಗಳಿಗೆ ಏರಿಕೆಯಾಗಿದೆ. ಬೆಳ್ಳಿಯ ನಾಣ್ಯಗಳ(100)ದರ 45,900 ರೂಪಾಯಿಗಳಿಗೆ ತಲುಪಿದೆ.