ಡೀಸೆಲ್ ದರವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಪ್ರಸ್ತಾವನೆಯನ್ನು ನೆನೆಗುದಿಯಲ್ಲಿದ್ದು, ಒಂದು ವೇಳೆ ಡೀಸೆಲ್ ದರವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದಲ್ಲಿ ಪ್ರತಿ ಲೀಟರ್‌ಗೆ 3.43ರಷ್ಟು ದರ ಹೆಚ್ಚಳವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರಕಾರ ಕಳೆದ ಜೂನ್ ತಿಂಗಳ ಅವಧಿಯಲ್ಲಿ ಪೆಟ್ರೋಲ್ ದರವನ್ನು ಸರಕಾರದಿಂದ ಮುಕ್ತಗೊಳಿಸಿತ್ತು. ಇದೀಗ ಡೀಸೆಲ್ ದರವನ್ನು ಕೂಡಾ ಮುಕ್ತಗೊಳಿಸಬೇಕು ಎನ್ನುವ ಒತ್ತಡವನ್ನು ಸರಕಾರ ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.
ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಕಂಪೆನಿಗಳು ಪ್ರತಿ ಲೀಟರ್‌ಗೆ ಅಮುದು ದರಕ್ಕಿಂತ 3.43ರಷ್ಟು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ.