ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಿನ್ಸ್ ವಿಲಿಯಮ್ ವಿವಾಹದಿಂದ 6 ಬಿಲಿಯನ್ ಪೌಂಡ್ಸ್‌ ಹೊರೆ (Prince William | Kate Middleton | Economy | Wedding | David Cameron)
Bookmark and Share Feedback Print
 
ಬ್ರಿಟನ್ ಮತ್ತೊಂದು ಅದ್ಧೂರಿ ಮದುವೆಗೆ ಸಾಕ್ಷಿಯಾಗುತ್ತಿದೆ. ಪ್ರಿನ್ಸ್ ವಿಲಿಯಮ್ ಮತ್ತು ಕಾಟೆ ಮಿಡ್ಲ್‌ಟೊನ್ ವಿವಾಹಕ್ಕೆ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೆಚ್ಚುವರಿ ರಜಾದಿನವನ್ನು ಘೋಷಿಸಿದ್ದರಿಂದ,ಆರ್ಥಿಕತೆಗೆ 6 ಬಿಲಿಯನ್ ಪೌಂಡ್ಸ್‌ಗಳ ಹೊರೆಯಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಿನ್ಸ್ ವಿಲಿಯಮ್ ವಿವಾಹ ಸಂಭ್ರಮವನ್ನು ಆಚರಿಸಲು ದೇಶಾದ್ಯಂತ ಏಪ್ರಿಲ್ 29 ರಂದು ಹೆಚ್ಚುವರಿ ರಜಾದಿನವನ್ನಾಗಿ ಘೋಷಿಸಲಾಗಿದೆ ಎಂದು ಕ್ಯಾಮರೂನ್ ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಏಪ್ರಿಲ್ 22 ರಿಂದ ಮೇ 2 ರ ವರೆಗೆ ಕೇವಲ ಮೂರು ದಿನಗಳ ಕಾಲ ವಹಿವಾಟು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಸಣ್ಣ ಉದ್ದಿಮೆಗಳ ಸಿಬ್ಬಂದಿಗಳು ಸರಕಾರದ ಘೋಷಣೆಗೆ ಅಪಸ್ವರ ವ್ಯಕ್ತಪಡಿಸಿದ್ದು, ಏತನ್ಮಧ್ಯೆ ಸಣ್ಣ ಕಂಪೆನಿಗಳ ಸಿಬ್ಬಂದಿಗಳು ರಜೆಗೆ ತೆರಳುತ್ತಿರುವುದರಿಂದ 11 ದಿನಗಳ ಕಾಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡುವುದು ಅನಿವಾರ್ಯವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹೆಚ್ಚುವರಿ ರಜಾ ದಿನಗಳನ್ನು ಘೋಷಿಸಿದ್ದರಿಂದ, ದೇಶದ ಉತ್ಪಾದನೆಯಲ್ಲಿ ಕೊರತೆಯಾಗಿ ಹೆಚ್ಚುವರಿ ವೇತನವನ್ನು ಪಾವತಿಸಬೇಕಾಗುವುದರಿಂದ ದೇಶದ ಆರ್ಥಿಕತೆಗೆ ಕನಿಷ್ಠ 6 ಬಿಲಿಯನ್ ಪೌಂಡ್ಸ್ ನಷ್ಟವಾಗಲಿದೆ ಎಂದು ಕಾನ್ಫೆಡರೇಶನ್ ಆಫ್ ಬ್ರಿಟಿಷ್ ಇಂಡಸ್ಟ್ರೀ(ಸಿಬಿಐ) ವರದಿಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ