ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ದರ ಶೀಘ್ರದಲ್ಲಿ ನಿಯಂತ್ರಣಕ್ಕೆ ಕ್ರಮ : ಪ್ರಧಾನಿ (Manmohan Singh | Inflation | Pranab Mukherjee)
Bookmark and Share Feedback Print
 
ದೇಶದ ಹಣದುಬ್ಬರ ದರ ಸಮಾಧಾನಕರ ಮಟ್ಟಕ್ಕಿಂತ ಏರಿಕ ಕಂಡಿರುವ ಹಿನ್ನೆಲೆಯಲ್ಲಿ, ಹಣದುಬ್ಬರ ಇಳಿಕೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರಕಾರ ಹಣದುಬ್ಬರ ದರ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಂಬರುವ ಕೆಲ ತಿಂಗಳುಗಳಲ್ಲಿ ಹಣದುಬ್ಬರ ಇಳಿಕೆಯಾಗುವ ವಿಶ್ವಾಸವಿದೆ ಎಂದು ಇಂಡಿಯನ್ ಲೇಬರ್ ಕಾನ್ಫ್‌ರೆನ್ಸ್ ಆಯೋಜಿಸಿದ ಸಮಾರಂಭದಲ್ಲಿ ತಿಳಿಸಿದ್ದಾರೆ.

ಅಗತ್ಯ ಆಹಾರ ವಸ್ತುಗಳ ದರಗಳ ಏರಿಕೆ ನಿರಂತರವಾಗಿ ಮುಂದುವರಿದಿದ್ದು, ದರ ಏರಿಕೆ ನಿಯಂತ್ರಿಸುವುದು ಕಠಿಣಸಾಧ್ಯ ಕಾರ್ಯವಾಗಿದೆ. ಆದರೆ ಸರಕಾರ ತನ್ನ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಹಾರ ಹಣದುಬ್ಬರ ಹಾಗೂ ಸಾಮಾನ್ಯ ಹಣದುಬ್ಬರ ದರ, ಕಳೆದ ಕೆಲ ವಾರಗಳಿಂದ ಇಳಿಕೆ ಕಾಣುತ್ತಿವೆ. ಆದರೆ,ನಿರೀಕ್ಷಿತ ಮಟ್ಟದಲ್ಲಿ ಇಳಿಕೆ ಕಾಣುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನವೆಂಬರ್ 6 ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.10.30ಕ್ಕೆ ಕುಸಿತ ಕಂಡಿದ್ದರೂ ಎರಡಂಕಿಗೆ ದಾಖಲಾಗಿದೆ. ಆದರೆ, ಮತ್ತಷ್ಟು ಇಳಿಕೆಯಾಗುವುದು ಅಗತ್ಯವಾಗಿದೆ ಎಂದರು.

ಏತನ್ಮಧ್ಯೆ, ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಸರಬರಾಜು ಕೊರತೆಯಿಂದಾಗಿ ಆಹಾರ ಹಣದುಬ್ಬರ ದರದಲ್ಲಿ ಇಳಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ