2ಜಿ ತರಂಗಾಂತರಗಳ ಹಂಚಿಕೆಯಲ್ಲಿ ಮಧ್ಯಸ್ಥಿಕ ವಹಿಸಿದ ಆರೋಪ ಎದುರಿಸುತ್ತಿರುವ ನಿರಾ ರಾಡಿಯಾಳನ್ನು ವಶಕ್ಕೆ ತೆಗೆದುಕೊಂಡ ಕೇಂದ್ರದ ಜಾಗೃತ ನಿರ್ದೇಶನಾಲಯದ ಅಧಿಕಾರಿಗಳು, ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿರಾ ರಾಡಿಯಾ, ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿ ಅಗತ್ಯವಾದಲ್ಲಿ ಜಾರಿ ನಿರ್ದೆಶನಾಲಯದ ಮುಂದೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿರಾ ರಾಡಿಯಾ ಅಗತ್ಯವಿದ್ದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆ ಹಗರಣದಲ್ಲಿ ತಾವು ಭಾಗಿಯಾಗಿಲ್ಲ. ತಮ್ಮ ಸಂಸ್ಥೆ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಬಹುದಾಗಿದೆ ಎಂದು ರಾಡಿಯಾ ಹೇಳಿದ್ದಾರೆ.
ನಾವು ಯಾವುದೇ ಕೆಲಸ ಮಾಡಿದರೂ ಪಾರದರ್ಶಕವಾಗಿ ಮಾಡುತ್ತೇವೆ. 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಸಹಕಾರ ನೀಡುವುದಾಗಿ ರಾಡಿಯಾ ಪುನರುಚ್ಚರಿಸಿದ್ದಾರೆ.