ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗುಜರಾತ್‌ನಲ್ಲಿ 2ನೇ ಘಟಕ ಸ್ಥಾಪಿಸಲು ಫೋರ್ಡ್ ಯೋಜನೆ (Indian car market | General motors | Ford)
Bookmark and Share Feedback Print
 
ದೇಶದ ವಾಹನೋದ್ಯಮ ಕ್ಷೇತ್ರ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಕಾರು ತಯಾರಿಕೆ ಸಂಸ್ಥೆ ಫೋರ್ಡ್ ಗುಜರಾತ್‌ನಲ್ಲಿ ಎರಡನೇ ಘಟಕವನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದೆ.

ಮೂಲಗಳ ಪ್ರಕಾರ ಫೋರ್ಡ್ ಕಂಪೆನಿ,ಮುಂಬರುವ 2015ರ ವೇಳೆಗೆ ಎಂಟು ನೂತನ ಮಾಡೆಲ್‌ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ನ್ಯಾನೋ ಘಟಕವಿರುವ ಸನಂದ್ ನಗರದಲ್ಲಿ ಘಟಕ ಸ್ಥಾಪನೆಗಾಗಿ ಸ್ಥಳವನ್ನು ನೀಡುವಂತೆ ಕೋರಲಾಗಿದೆ.

ಫಿಗೋ ಮಾಡೆಲ್ ಕಾರಿನ ಬೇಡಿಕೆ ಹೆಚ್ಚಳದಿಂದಾಗಿ ಉತ್ತೇಜಿತಗೊಂಡ ಫೋರ್ಡ್, ಮತ್ತೊಂದು ಘಟಕ ಸ್ಥಾಪಿಸಲು ಯೋಜನೆಗಳನ್ನು ರೂಪಿಸಿದೆ. ಘಟಕ ಸ್ಥಾಪನೆಗೆ ಅಗತ್ಯವಾದ ನಿಯಮಗಳನ್ನು ಪೂರೈಸಲು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದೆ. ಆದರೆ, ಇಲ್ಲಿಯವರೆಗೆ ಮಾತುಕತೆಗಳು ಅಂತಿಮವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರಲ್ ಮೋಟಾರ್ಸ್, ಟಾಟಾ ಮೋಟಾರ್ಸ್ ಗುಜರಾತ್‌ನಲ್ಲಿ ಘಟಕಗಳನ್ನು ಸ್ಥಾಪಿಸಿದ ನಂತರ ಇದೀಗ ಮೂರನೇ ಬೃಹತ್ ಕಂಪೆನಿ ಫೋರ್ಡ್‌ ಕೂಡಾ ರಾಜ್ಯದಲ್ಲಿ ಘಟಕ ಸ್ಥಾಪಿಸಲು ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ