ತರಕಾರಿ, ದ್ವಿದಳ ಧಾನ್ಯಗಳ ದರಗಳಲ್ಲಿ ಅಲ್ಪ ಇಳಿಕೆಯಾಗಿದ್ದರಿಂದ, ನವೆಂಬರ್ 13ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಸತತ ಆರನೇ ವಾರಕ್ಕೆ ಇಳಿಕೆ ಕಂಡು ಶೇ.10.15ಕ್ಕೆ ತಲುಪಿದೆ.
ಮುಂಗಾರು ಅವಧಿ ಅಂತ್ಯಗೊಂಡ ನಂತರ ತರಕಾರಿ ಮತ್ತು ದ್ವಿದಳ ಧಾನ್ಯಗಳ ದರಗಳಲ್ಲಿ ಅಲ್ಪ ಇಳಿಕೆಯಾಗಿದ್ದರಿಂದ, ಕಳೆದ ವಾರಂತ್ಯಕ್ಕೆ ಶೇ.10.3ಕ್ಕೆ ತಲುಪಿತ್ತು.
ಏತನ್ಮಧ್ಯೆ, ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.7.58ರಷ್ಟು ಕುಸಿತ ಕಂಡಿದೆ.ತರಕಾರಿ ದರಗಳಲ್ಲಿ ಶೇ.3.76ರಷ್ಟು ಇಳಿಕೆಯಾಗಿದೆ. ಆಲೂಗಡ್ಡೆ ದರದಲ್ಲಿ ಕೂಡಾ ಶೇ.48.70ರಷ್ಟು ಕುಸಿತವಾಗಿದೆ.
ಏತನ್ಮಧ್ಯೆ, ವಾರ್ಷಿಕ ಆಧಾರದ ಹಿನ್ನೆಲೆಯಲ್ಲಿ ಆಹಾರ ವಸ್ತುಗಳಾದ ಮೊಟ್ಟೆ, ಮಾಂಸ ಮತ್ತು ಮೀನು ದರಗಳಲ್ಲಿ ಶೇ.23ರಷ್ಟು ಏರಿಕೆಯಾಗಿದೆ. ಈರುಳ್ಳಿ ದರದಲ್ಲಿ ಕೂಡಾ ಶೇ.17.03ರಷ್ಟು ಏರಿಕೆಯಾಗಿದೆ
ಹಣ್ಣು ಮತ್ತು ಹಾಲು ದರಗಳಲ್ಲಿ ಕೂಡಾ ಕ್ರಮವಾಗಿ ವಾರ್ಷಿಕ ಆಧಾರದನ್ವಯ ಶೇ.21.85, ಮತ್ತು ಶೇ.16.90 ರಷ್ಟು ಏರಿಕೆಯಾಗಿದೆ.