ಮೊಯಿಲ್ ಲಿಮಿಟೆಡ್ ಕಂಪೆನಿ 10 ರೂಪಾಯಿ ಮುಖಬೆಲೆಯ 33,600,000 ಶೇರುಗಳನ್ನು ಸಾರ್ವಜನಿಕವಾಗಿ ಮುಕ್ತ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ನವೆಂಬರ್ 26 ರಿಂದ ಮಾರುಕಟ್ಟೆಗೆ ಲಭ್ಯವಾಗಲಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿಯ ಶೇರುಗಳ ಮಾರಾಟದ ಅವಧಿ ರಿಟೇಲ್ ಮತ್ತು ನಾನ್-ಇನ್‌ಸ್ಟಿಟ್ಯೂಶನಲ್ ಬಿಡ್ಡರ್‌ಗಳಿಗಾಗಿ, ನವೆಂಬರ್ 30ಕ್ಕೆ ಅಂತ್ಯಗೊಳ್ಳಲಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.
ಶೇರುಗಳನ್ನು ಖರೀದಿಸುವ ಗ್ರಾಹಕರಿಗೆ, ಶೇ.5ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಕಂಪೆನಿಯ ಅಧಿಕಾರಿಗಳಉ ತಿಳಿಸಿದ್ದಾರೆ.
ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಶೇರುಗಳ ಮುಕ್ತ ಮಾರಾಟಕ್ಕೆ, ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ಅನುಮತಿ ನೀಡಿದೆ ಎಂದು ಮೊಯಿಲ್ ಲಿಮಿಟೆಡ್ ವಕ್ತಾರರು ತಿಳಿಸಿದ್ದಾರೆ.