ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗ್ಲೋಬಲ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್‌ಸಿಟಿಗೆ ಎನ್‌ಎಬಿಎಚ್ ಪ್ರಶಸ್ತಿ (NABH accreditation | Global Hospitals and Health City | Chennai)
ಗ್ಲೋಬಲ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್‌ಸಿಟಿಗೆ ಎನ್‌ಎಬಿಎಚ್ ಪ್ರಶಸ್ತಿ
ಚೆನ್ನೈ, ಶುಕ್ರವಾರ, 26 ನವೆಂಬರ್ 2010( 13:08 IST )
PTI
ನಗರದ ಪ್ರಖ್ಯಾತ ಗ್ಲೋಬಲ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್ ಸಿಟಿ ಸಂಸ್ಥೆಯ ಸಾಮಾಜಿಕ ಕಳಕಳಿ, ಕರ್ತವ್ಯ ನಿರ್ವಹಣೆಗಾಗಿ ಕೇವಲ ಒಂದು ವರ್ಷದ ಅವಧಿಯಲ್ಲಿ ಜಾಗತಿಕ ಮಟ್ಟದ ಪ್ರತಿಷ್ಠಿತ ಎನ್‌ಎಬಿಎಚ್(NABH) ಅಕ್ರೆಡಿಟೇಶನ್ ಪ್ರಶಸ್ತಿ ದೊರೆತಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯಸ್ಥ ಡಾ.ಗಿರಿಧರ್ ಗ್ಯಾನಿ, ತಮಿಳುನಾಡು ಸರಕಾರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ.ವಿ.ಕೆ. ಸುಬ್ಬರಾಜ್ ಉಪಸ್ಥಿತರಿದ್ದರು.
ಅಮೆರಿಕ ಮೂಲದ ಅಡ್ವೈಸರಿ ಬೋರ್ಡ್ ಆಫ್ ಮೆಡಿಕಲ್ ಟೂರಿಸಂ ಸಂಸ್ಥೆಯನ್ನು ಪ್ರತಿನಿಧಿಸುವ ಬೋರ್ಡ್ ಆಫ್ ಏಷಿಯನ್ ಸೂಸೈಟಿ ಫಾರ್ ಕ್ವಾಲಿಟಿ ಇನ್ ಹೆಲ್ತ್‌ಕೇರ್ ಮತ್ತು ಇಂಟರ್‌ನ್ಯಾಷನಲ್ ಸೂಸೈಟಿ ಆಫ್ ಕ್ವಾಲಿಟಿ ಅಶೂರೆನ್ಸ್ ಇನ್ ಹೆಲ್ತ್ ಕೇರ್ ಸಂಸ್ಥೆ, ಎನ್‌ಎಬಿಎಚ್ ಗುಣಣಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.
ರೋಗಿಗಳ ಯೋಗಕ್ಷೇಮ, ರೋಗಿಗಳ ಸುರಕ್ಷತೆ, ರೋಗಿಗಳ ಹಕ್ಕುಗಳು ಮತ್ತು ಗೌರವ ನೀಡುವಂತಹ ಕರ್ತವ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಆಸ್ಪತ್ರೆಗಳಿಗೆ ಎನ್‌ಎಬಿಎಚ್ ಅಕ್ರೆಡಿಟೇಶನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಗ್ಲೋಬಲ್ ಹಾಸ್ಪಿಟಲ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಕೆ.ರವೀಂದ್ರನಾಥ್ ಮಾತನಾಡಿ, ಸಂಸ್ಥೆಗೆ ಎನ್‌ಎಬಿಎಚ್ ಅಕ್ರೆಡಿಟೇಶನ್ ಪ್ರಶಸ್ತಿ ಅಗತ್ಯವಾಗಿತ್ತು.ಇದರಿಂದಾಗಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಉತ್ತಮ ಸೇವೆ ನೀಡಲು ಪ್ರೋತ್ಸಾಹ ದೊರೆತಂತಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಗಳಾದ ಡಾ.ಗಿರಿಧರ್ ಗ್ಯಾನಿ ಮಾತನಾಡಿ, ಎನ್‌ಎಬಿಎಚ್ ಅಕ್ರೆಡಿಟೇಶನ್‌ನಿಂದಾಗಿ ರೋಗಿಗಳ ಸುರಕ್ಷತೆ ಮತ್ತು ಜಾಗತಿಕ ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ತಮಿಳುನಾಡು ಸರಕಾರದ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಾದ ಡಾ.ವಿ.ಕೆ.ಸುಬ್ಬುರಾಜ್ ಮಾತನಾಡಿ, ನಗರದಲ್ಲಿನ ಪ್ರಮುಖ ಆಸ್ಪತ್ರೆಗಳು ಎನ್‌ಎಬಿಎಚ್ ಅಕ್ರೆಡಿಟೇಶನ್ ಪ್ರಶಸ್ತಿಯನ್ನು ಪಡೆಯಲು ಜಾಗತಿಕ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ನೀಡುತ್ತಿರುವುದು ಉಲ್ಲಾಸಕರ ಬೆಳವಣಿಗೆ. ಇದರಿಂದಾಗಿ, ಪ್ರಮುಖ ಆಸ್ಪತ್ರೆಗಳು ಯಾವ ರೀತಿ ಚಿಕಿತ್ಸೆ ನೀಡುತ್ತಿವೆ ಎನ್ನುವುದರ ಮಾಹಿತಿ ಲಭಿಸುತ್ತದೆ ಎಂದರು.
ಗ್ಲೋಬಲ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವೈದ್ಯಕೀಯ ಸೇವೆಗಳ ಗ್ರೂಪ್ ನಿರ್ದೇಶಕರಾದ ಡಾ.ಕರಂಜೇಕರ್ ಮಾತನಾಡಿ, ಹೇಲ್ತ್‌ಕೇರ್ ಕ್ಷೇತ್ರದಲ್ಲಿನ ಲೋಪ ದೋಷಗಳು ವೈದ್ಯರಿಗೆ ಕಳವಳ ಮೂಡಿಸುವಂತಹದಾಗಿವೆ. ಆದ್ದರಿಂದ, ಉತ್ಕ್ರಷ್ಟ ಮಟ್ಟದ ತಂತ್ರಜ್ಞಾನ ಬಳಸಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ತುಂಬಾ ಎಚ್ಚರಿಕೆಯಿಂದ ಗಮನಿಸುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಗ್ಲೋಬಲ್ ಹಾಸ್ಪಿಟಲ್ಸ್ ಆಂಡ್ ಹೇಲ್ತ್‌ಸಿಟಿ
ಚೆನ್ನೈನಲ್ಲಿರುವ ಗ್ಲೋಬಲ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್ ಸಿಟಿ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆಯಾಗಿದ್ದು, 500 ಹಾಸಿಗೆಗಳನ್ನು ಒಳಗೊಂಡಿದ್ದು, 1000 ಹಾಸಿಗೆಗಳವರೆಗೆ ವಿಸ್ತರಿಸಬಹುದಾಗಿದೆ. ಆಸ್ಪತ್ರೆ, ಹಳೆ ಮಹಾಬಲಿಪುರಂ ರಸ್ತೆಯಲ್ಲಿ ನಿರ್ಮಾಣಗೊಂಡಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ಹಂಸಾ ಸಾರ್ವಜನಿಕ ಸಂಪರ್ಕಾಧಿಕಾರಿ: ರಾಜೀವ್/ಪುನೀತ್ ಮೊಬೈಲ್, 9884399129/9884440937
ಗ್ಲೋಬಲ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್ ಸಿಟಿ, ಚೆನ್ನೈ ಉಮೇಶ್. ಆರ್. ಜಿಎಂ-ಬ್ರಾಂಡ್ ಕಮ್ಯೂನಿಕೇಶನ್ ದೂರವಾಣಿ: 09003099260, www.globalhospitalsindia.comಗೆ ಸಂಪರ್ಕಿಸಬಹುದಾಗಿದೆ.