ಅಹ್ಮದಾಬಾದ್, ಶುಕ್ರವಾರ, 26 ನವೆಂಬರ್ 2010( 15:59 IST )
PTI
ಚಳಿಗಾಲದಲ್ಲಿ ಬೆಳ್ಳುಳ್ಳಿ-ಹಸಿಮೆಣಸಿನಕಾಯಿ ಚಟ್ನಿಯನ್ನು ತಿನ್ನವ ನಿಮ್ಮ ಬಯಕೆಗೆ ಸ್ವಲ್ಪ ಕಢಿವಾಣ ಹಾಕಿಕೊಳ್ಳಿ. ಬೆಳ್ಳುಳ್ಳಿ ದರ, ಎಲ್ಲಾ ಕಾಲದ ದಾಖಲೆಯ ಏರಿಕೆ ಕಂಡು ಪ್ರತಿ ಕೆಜಿಗೆ 200 ರೂಪಾಯಿಗಳಿಗೆ ತಲುಪಿದೆ. ಕಳೆದ ಮೂರು ತಿಂಗಳುಗಳಿಂದ ಏರಿಕೆ ಕಾಣಉತ್ತಿದ್ದ ಬೆಳ್ಳುಳ್ಳಿ ದರ ಇದೀಗ ದ್ವಿಗುಣವಾಗಿದೆ.
ಮೂರು - ಅಥವಾ ನಾಲ್ಕು ತಿಂಗಳುಗಳ ಹಿಂದೆ ಬೆಳ್ಳುಳ್ಳಿ ದರ ಪ್ರತಿ ಕೆಜಿಗೆ 100 ರೂಪಾಯಿಗಳಾಗಿತ್ತು. ಇದೀಗ ಪ್ರತಿ ಕೆಜಿಗೆ 200 ರೂಪಾಯಿಗಳಿಗೆ ತಲುಪಿದೆ.ಸಾಮಾನ್ಯವಾಗಿ ಚಳಿಗಾಲದಲ್ಲಿ ಜನತೆ ಸಗಟು ಪ್ರಮಾಣದಲ್ಲಿ ಖರೀದಿಸುತ್ತಾರೆ. ಆದರೆ, ಇದೀಗ ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.
PTI
ಏತನ್ಮಧ್ಯೆ, ದರ ಏರಿಕೆಯಿಂದ ಕೇವಲ ಮನೆಯೊಡತಿಯರು ಮಾತ್ರ ಕಂಗಾಲಾಗಿಲ್ಲ. ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಿಂದ ಸೇವಿಸಿದಲ್ಲಿ ಕೊಲೆಸ್ಟ್ರೋಲ್ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಮತ್ತು ರಕ್ತವನ್ನು ತೆಳುವಾಗಿಸುತ್ತದೆ ಎಂದು ವೈದ್ಯರು ಸಾಮಾನ್ಯವಾಗಿ ಸಲಹೆ ನೀಡುತ್ತಾರೆ ಆದರೆ, ಬಡರೋಗಿಗಳು ದರ ಏರಿಕೆಯಿಂದ ಬೆಳ್ಳುಳ್ಳಿಯನ್ನು ಖರೀದಿಸಲು ಮೀನಮೇಷ ಎಣಿಸುವಂತಾಗಿದೆ.
ಈರುಳ್ಳಿ ದರ ಪ್ರತಿ ಕೆಜಿಗೆ 46 ರೂಪಾಯಿಗಳಿಗೆ ತಲುಪಿದೆ.ಬೆಳ್ಳುಳ್ಳಿ ದರ ಪ್ರತಿ ಕೆಜಿಗೆ 200 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.