ಎಲ್‌ಐಸಿ ಹೌಂಸಿಂಗ್ ಫೈನಾನ್ಸ್ ಸಿಇಒ ಸ್ಥಾನಕ್ಕೆ ಶರ್ಮಾ ನೇಮಕ
ನವದೆಹಲಿ, ಶುಕ್ರವಾರ, 26 ನವೆಂಬರ್ 2010( 19:58 IST )
ಎಲ್‌ಐಸಿ ಹೌಂಸಿಂಗ್ ಫೈನಾನ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ರಾಮಚಂದನ್ ನಾಯರ್ ಗೃಹಸಾಲ ಲಂಚದ ಪ್ರಕರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿದ್ದರಿಂದ ಅವರ ಸ್ಥಾನಕ್ಕೆ ವಿ.ಕೆ.ಶರ್ಮಾ ಅವರನ್ನು ನೇಮಕ ಮಾಡಲಾಗಿದೆ ಎಂದು ಎಲ್‌ಐಸಿ ಸಂಸ್ಥೆಯ ಮುಖ್ಯಸ್ಥ ಟಿ.ಎಸ್.ವಿಜಯನ್ ಹೇಳಿದ್ದಾರೆ.
ಎಲ್‌ಐಸಿ ಹೌಂಸಿಂಗ್ ಫೈನಾನ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ವಿ.ಕೆ.ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಮುಂದಿನ ವಾರದ ಅವಧಿಯಲ್ಲಿ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಶರ್ಮಾ ಪ್ರಸ್ತುತ ಎಲ್‌ಐಸಿಯ ದಕ್ಷಿಣ ವಲಯದ ವ್ಯವಹಾರಗಳನ್ನುನೋಡಿಕೊಳ್ಳುತ್ತಿದ್ದಾರೆ.
ಗೃಹ ಸಾಲ ಹಗರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ನಾಯರ್ ಮತ್ತು ಸಂಸ್ಥೆಯ ಕಾರ್ಯದರ್ಶಿ ನರೇಶ್ ಕೆ.ಚೋಪ್ರಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ ನಂತರ ತುರ್ತುಸಭೆ ಕರೆದ ಎಲ್‌ಐಸಿ ಅಡಳಿತ ಮಂಡಳಿ ತುರ್ತುಸಭೆ ಕರೆದು ಶರ್ಮಾ ಅವರನ್ನು ನೇಮಕ ಮಾಡಿದೆ.
ತುರ್ತುಸಭೆಯ ನಂತರ ಮಾತನಾಡಿದ ವಿಜಯನ್, ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಚಂದ್ರಶೇಖರ್ ಮಧ್ಯಂತರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.