ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕುಸಿತವಾಗಿವೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.
ಗ್ರಾಹಕರು ಹಾಗೂ ಆಭರಣಗಳ ತಯಾರಕರು ಚಿನ್ನದ ಖರೀದಿಯಲ್ಲಿ ನಿರಾಸಕ್ತಿಯನ್ನು ತೋರಿದ್ದರಿಂದ, ಚಿನ್ನದ ದರದಲ್ಲಿ ಕುಸಿತವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಬೆಳ್ಳಿಯ ದರದಲ್ಲಿ ಕೂಡಾ, ಪ್ರತಿ ಕೆಜಿಗೆ 350 ರೂಪಾಯಿಗಳ ಇಳಿಕೆಯಾಗಿ 42,005 ರೂಪಾಯಿಗಳಿಗೆ ತಲುಪಿದೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಪ್ರತಿ 10ಗ್ರಾಂಗೆ 20,385 ರೂಪಾಯಿಗಳಿಗೆ ತಲುಪಿದ್ದ ಸ್ಟ್ಯಾಂಡರ್ಡ್ ಚಿನ್ನ, ಇಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 40 ರೂಪಾಯಿಗಳ ಇಳಿಕೆಯಾಗಿ 20,345 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕೂಡಾ, ಚಿನ್ನದ ದರ ಪ್ರತಿ ಔನ್ಸ್‌ಗೆ 10.60 ಡಾಲರ್‌ಗಳ ಇಳಿಕೆಯಾಗಿ 1,362.40 ಡಾಲರ್‌ಗಳಿಗೆ ತಲುಪಿದೆ.