ಟಾಟಾ ಗ್ರೂಪ್‌ನ ಕಾರ್ಪೋರೇಟ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ನಿರಾ ರಾಡಿಯಾ ಮತ್ತು ತಮ್ಮ ವಿರುದ್ಧ ನಡೆದ ದೂರವಾಣಿ ಸಂಭಾಷಣೆಗಳು ಟಿವಿ ಚಾನೆಲ್‌ಗಳು ಪ್ರಸಾರ ಮಾಡುತ್ತಿರುವುದನ್ನು ವಿರೋಧಿಸಿ ಮುಖ್ಯಸ್ಥ ರತನ್ ಟಾಟಾ ಅಪೆಕ್ಸ್ ನ್ಯಾಯಾಲಯದ ಮೊರೆಹೋಗಲು ನಿರ್ಧರಿಸಿದ್ದಾರೆ.
ಉಪ್ಪು ತಯಾರಿಕೆಯಿಂದ ಸಾಫ್ಟ್‌ವೇರ್ ಕಂಪೆನಿಗಳವರೆಗೆ 320,000 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿರುವ ರತನ್ ಟಾಟಾ, ತಮ್ಮ ಮತ್ತು ರಾಡಿಯಾ ನಡುವಣ ಸಂಭಾಷಣೆಗಳು ಬಹಿರಂಗವಾಗಿದ್ದರಿಂದ ತಮ್ಮ ಖಾಸಗಿ ಬದುಕಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಕೇವಲ ತನಿಖೆಗಾಗಿ ಫೋನ್ ಕರೆಗಳನ್ನು ಕದ್ದಾಲಿಸಲು ಮಾತ್ರ ಕಾನೂನು ನಿಯಮಗಳಲ್ಲಿ ಅನುಮತಿಯಿದೆ. ಆದರೆ, ಸರಕಾರಿ ಸಂಸ್ಥೆಗಳು ರಾಡಿಯಾ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿರುವುದು ಅಪರಾಧವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
2ಜಿ ತರಂಗಾಂತರಗಳ ಹಗರಣದ ತನಿಖೆಗೆ ತಾವು ಅಡ್ಡಿಯಾಗಿಲ್ಲವೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.