ಆದಾಯ ತೆರಿಗೆ ಪಾವತಿದಾರರು ರಿಟರ್ನ್ಸ್ ಪಾವತಿಸುವ ಸಂದರ್ಭದಲ್ಲಿ ಇದೀಗ ನೂತನ 'ಡಿನ್'(DIN) ಸಂಖ್ಯೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಮುಂಬರುವ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಲು ಕೂಡಾ ಸುಲಭವಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾನ್ ಮತ್ತು ಟಾನ್ ಸಂಖ್ಯೆಯಂತೆ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್(ಡಿನ್)ನ್ನು ಪ್ರತಿಯೊಬ್ಬ ಆದಾಯ ಪಾವತಿದಾರರಿಗೆ ನೀಡಲಾಗುತ್ತದೆ. 2010-11ರ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸುವ ಗ್ರಾಹಕರು 'ಡಿನ್' ಸಂಖ್ಯೆಯನ್ನು ಬಳಸುವುದು ಕಡ್ಡಾಯವಾಗಿದೆ. ಆದಾಯ ತೆರಿಗೆ ಪಾವತಿಯ ವಿವರಗಳನ್ನು ಪಡೆಯಲು ಕೂಡಾ ಸುಲಭವಾಗುತ್ತದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಟೆಕ್ಸೆಸ್(CBDT) ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ಪಾವತಿದಾರರಿಗೆ 'ಡಿನ್' ಸಂಖ್ಯೆಯನ್ನು ನೀಡುತ್ತಿದ್ದು, ತೆರಿಗೆ ಪಾವತಿಯಲ್ಲಿನ ದೋಷಗಳು, ತೆರಿಗೆ ರಿಟರ್ನ್ಸ್ ಮತ್ತು ಇಲಾಖೆಯನ್ನು ಸುಲಭವಾಗಿ ಸಂಪರ್ಕಿಸಲು ನೆರವಾಗುತ್ತದೆ ಎಂದು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯ 'ಆಯಕರ್ ಸಂಪರ್ಕ ಕೇಂದ್ರ' ಗಳು ಪ್ರಸಕ್ತ ತಿಂಗಳ ಅವಧಿಯಲ್ಲಿ, ಆದಾಯ ತೆರಿಗೆ ಪಾವತಿದಾರರಿಗೆ 'ಡಿನ್'ಸಂಖ್ಯೆಯನ್ನು ನೀಡಲಿದೆ. ಆದಾಯ ತೆರಿಗೆ ಇಲಾಖೆಯೇ 'ಡಿನ್' ಸಂಖ್ಯೆಯನ್ನು ನೀಡುವುದರಿಂದ ಪಾವತಿದಾರರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ, ತೆರಿಗೆ ಪಾವತಿದಾರರು ಹಾಗೂ ತೆರಿಗೆ ಸಂಗ್ರಹಕಾರರು ಆದಾಯ ತೆರಿಗೆ ಪಾವತಿಸುವ ಸಂದರ್ಭದಲ್ಲಿ, ಪಾನ್(PAN) ಸಂಖ್ಯೆಯನ್ನು ಅಥವಾ ಟಾನ್ (TAN) ಸಂಖ್ಯೆ ಅಗತ್ಯವಾಗಿತ್ತು.