ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ದರ ಹೆಚ್ಚಳ ನಿರೀಕ್ಷೆ
ನವದೆಹಲಿ, ಸೋಮವಾರ, 29 ನವೆಂಬರ್ 2010( 16:47 IST )
ಭಾರತದ ಆರ್ಥಿಕ ವೃದ್ಧಿ ದರ ಸೆಪ್ಟೆಂಬರ್ ಕ್ವಾರ್ಟರ್ ಅವಧಿಯಲ್ಲಿ ಶೇ.8.3ಕ್ಕೆ ತಲುಪುವ ನಿರೀಕ್ಷೆಗಳಿವೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಆರ್ಥಿಕ ತಜ್ಞರ ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಆರ್ಥಿಕ ವೃದ್ಧಿ ದರ ಶೇ.7.2ರಿಂದ ಶೇ.9.0ರ ವರೆಗೆ ಚೇತರಿಕೆಯಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿ ಶೇ.8ರಷ್ಟು ಆರ್ಥಿಕ ವೃದ್ಧಿ ದರ ಏರಿಕೆಯಾಗಿದ್ದು, ಉತ್ತಮ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಜಿಡಿಪಿ ದರದಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.