ದೇಶದ ಆರ್ಥಿಕತೆ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕುಸಿತವಾಗಲಿದೆ ಎನ್ನುವ ಭೀತಿಯ ಮಧ್ಯೆಯು ನಿರೀಕ್ಷೆಗೂ ಮೀರಿ ಶೇ.8.9ಕ್ಕೆ ಚೇತರಿಕೆ ಕಂಡಿದೆ. ಆರ್ಥಿಕ ವರ್ಷಾಂತ್ಯಕ್ಕೆ ಶೇ.9ಕ್ಕೆ ತಲುಪುವ ನಿರೀಕ್ಷೆಗಳಿವೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ ತ್ರೈಮಾಸಿಕ ಅವಧಿಯಲ್ಲಿ ಶೇ.9.6ರಷ್ಟು ಚೇತರಿಕೆ ಕಂಡ ಚೀನಾದ ನಂತರದ ಸ್ಥಾನವನ್ನು ಪಡೆದಿರುವ ಭಾರತ, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಶೇ.8.9ಕ್ಕೆ ತಲುಪಿದೆ.
ಸೇವಾ ಕ್ಷೇತ್ರ ಮತ್ತು ಕೈಗಾರಿಕೋದ್ಯಮ ಕ್ಷೇತ್ರದ ಚೇತರಿಕೆಯಿಂದಾಗಿ, ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳುಗಳ ಅವಧಿಯಲ್ಲಿ ಜಿಡಿಪಿ ದರ ಶೇ.8.9ಕ್ಕೆ ತಲುಪಿದೆ.
ಕೇಂದ್ರದ ಲೆಕ್ಕಪರಿಶೋಧಕ ಸಂಸ್ಥೆ ಕೂಡಾ, ವರ್ಷದ ಆರಂಭಿಕ ಆರು ತಿಂಗಳುಗಳ ಅವಧಿಯಲ್ಲಿ ಜಿಡಿಪಿ ದರ ಶೇ.8.9ಕ್ಕೆ ಏರಿಕೆಯಾಗಲಿದೆ ಎಂದು ಸಮೀಕ್ಷಾ ವರದಿಯನ್ನು ಪ್ರಕಟಿಸಿತ್ತು.