ಕೆಪಿಸಿಎಲ್‌ನಿಂದ ಬಿಎಚ್‌ಇಎಲ್‌ಗೆ 3,700 ಕೋಟಿ ರೂ ಗುತ್ತಿಗೆ
ತಿರುಚಿರಾಪಳ್ಳಿ, ಮಂಗಳವಾರ, 30 ನವೆಂಬರ್ 2010( 15:44 IST )
ಸರಕಾರಿ ಸ್ವಾಮ್ಯದ ಬಿಎಚ್‌ಇಎಲ್ ಸಂಸ್ಥೆ, ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್‌ನಿಂದ 700ಮೆಗಾ ವ್ಯಾಟ್ ವಿದ್ಯುತ್ ಘಟಕ ನಿರ್ಮಾಣಕ್ಕಾಗಿ 3,700 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ.
ಬಿಎಚ್‌ಇಎಲ್ ಸಂಸ್ಥೆಗೆ, ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ ಒಟ್ಟು 3,700 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ಪಡೆಯಲಾಗಿದೆ ಎಂದು ಭಾರತ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಎಚ್‌ಇಎಲ್ ಸಂಸ್ಥೆ, ಬಳ್ಳಾರಿ ಥರ್ಮಲ್ ಪವರ್ ಸ್ಟೇಶನ್‌ಗೆ ಈಗಾಗಲೇ 500 ಮೆಗಾ ವ್ಯಾಟ್ ಘಟಕಕ್ಕೆ ಉಪಕರಣಗಳನ್ನು ಸರಬರಾಜು ಮಾಡಿದೆ.