ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಿಮ್ಮಲ್ಲಿ 25 ಪೈಸೆ ನಾಣ್ಯಗಳಿವೆಯೇ? ಕೂಡ್ಲೆ ಖರ್ಚು ಮಾಡಿ (Government | Withdraw | Coins | Size)
Bookmark and Share Feedback Print
 
PTI
ಕೇಂದ್ರ ಸರಕಾರ 25 ಪೈಸೆ ನಾಣ್ಯಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಒಂದು ರೂಪಾಯಿ ನಾಣ್ಯದ ಗಾತ್ರವನ್ನು 50 ಪೈಸೆ ಗಾತ್ರಕ್ಕೆ ಹಾಗೂ 50 ಪೈಸೆ ಗಾತ್ರವನ್ನು 25 ಪೈಸೆ ಗಾತ್ರದ ರೂಪದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ನಾಣ್ಯಗಳ ಹಾಗೂ ರೂಪಾಯಿಗಳ ಗಾತ್ರ ಬದಲಾವಣೆಗಾಗಿ ಸಲಹೆಗಳನ್ನು ನೀಡಲು ನೇಮಿಸಲಾದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನಂತೆ, ಎರಡು ರೂಪಾಯಿ ನಾಣ್ಯವನ್ನು ಒಂದು ರೂಪಾಯಿ ಗಾತ್ರಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ವಿತ್ತಖಾತೆ ರಾಜ್ಯ ಸಚಿವ ನಮೋ ನರೈನ್ ಮೀನಾ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಸಂಸತ್ ಸದಸ್ಯ ರಾಮಚಂದ್ರ ಖುಂಟಿಯಾ ಅವರ ಪ್ರಶ್ನೆಗಳಿಗೆ, ಸಚಿವ ನಮೋನರೈನ್ ಮೀನಾ ಲಿಖಿತ ಉತ್ತರ ನೀಡಿದರು.

ಸಾರ್ವಜನಿಕರು ಒಂದು ರೂಪಾಯಿ ಹಾಗೂ ಎರಡು ರೂಪಾಯಿಗಳ ನಾಣ್ಯಗಳನ್ನು ಬಳಸುವ ಸಂದರ್ಭದಲ್ಲಿ, ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು, ಸಮಿತಿ ನೀಡಿದ ಶಿಫಾರಸ್ಸುಗಳನ್ನು ಕೇಂದ್ರ ಸರಕಾರ ಸ್ವೀಕರಿಸಿದೆ ಎಂದು ಸಚಿವ ಮೀನಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ