ಬಿಎಸ್‌ಎನ್‌ಎಲ್ ದೂರವಾಣಿ ಗ್ರಾಹಕರಿಗೆ ಸಂತಸದ ಸುದ್ದಿ ಬಂದಿದೆ. ಇದೀಗ ಬಿಎಸ್‌ಎನ್‌ಎಲ್ ಬಳಕೆದಾರರು ಸ್ಥಳೀಯ ದರಗಳಲ್ಲಿ ಎಸ್‌ಟಿಡಿ ಕರೆಗಳನ್ನು ಮಾಡಬಹುದಾಗಿದೆ.
ಬಿಎಸ್‌ಎನ್‌ಎಲ್ ಬಳಕೆದಾರರು ದೇಶದ ಯಾವುದೇ ಸ್ಥಿರ ದೂರವಾಣಿಗೆ, ಸ್ಥಳೀಯ ದರದಂತೆ ಮೂರು ನಿಮಿಷಕ್ಕೆ 1 ರೂಪಾಯಿ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ.
ಭಾರತದ ಟೆಲಿಕಾಂ ಉದ್ಯಮದಲ್ಲಿ ಬಿಎಸ್‌ಎನ್‌ಎಲ್ ನಡೆ, ಮತ್ತಷ್ಟು ಸ್ಪರ್ಧಾತ್ಮಕತೆಗೆ ಕಾರಣವಾಗಿದೆ. ಇದಕ್ಕಿಂತ ಮೊದಲು ಎಸ್‌ಟಿಡಿ ದರಗಳು ಸ್ಥಳೀಯ ದರಗಳಿಗಿಂತ ಹೆಚ್ಚಳವಾಗಿತ್ತು.
ಇಂದಿನಿಂದ ಬಿಎಸ್‌ಎನ್‌ಎಲ್ ಗ್ರಾಹಕರು, ದೇಶದ ಯಾವುದೇ ಸ್ಥಿರ ದೂರವಾಣಿಗೆ ಮೂರು ನಿಮಿಷದ ಕರೆಗೆ 1 ರೂಪಾಯಿ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಸೌಮ್ಯ ರಾಯ್ ತಿಳಿಸಿದ್ದಾರೆ.
ಏತನ್ಮಧ್ಯೆ, ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ ಇತರ ಆಪರೇಟರ್‌ಗಳ ಮೊಬೈಲ್‌ಗಳಿಗೆ ಪ್ರತಿ ನಿಮಿಷಕ್ಕೆ 1 ರೂಪಾಯಿ ದರದಲ್ಲಿ ಕರೆಗಳನ್ನು ಮಾಡಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.