ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನಿಂದಾಗಿ, ಚಿನ್ನದ ದರ ದಾಖಲೆಯ ಏರಿಕೆ ಕಂಡು ಪ್ರತಿ 10 ಗ್ರಾಂಗೆ 20,625 ರೂಪಾಯಿಗಳಿಗೆ ತಲುಪಿದೆ.
ಮುಂಬರುವ ದಿನಗಳಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 21,000 ರೂಪಾಯಿಗಳಿಗೆ ತಲುಪುವ ನಿರೀಕ್ಷೆಗಳಿವೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯುರೋಪ್ ರಾಷ್ಟ್ರಗಳಲ್ಲಿ ಸಾಲದ ಸಮಸ್ಯೆಗಳು ನಿರಂತರವಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಧನಾತ್ಮಕ ಮಾರುಕಟ್ಟೆಯ ವಹಿವಾಟಿನಿಂದಾಗಿ ಚಿನ್ನದ ದರ ಪ್ರತಿ 10 ಗ್ರಾಂಗೆ 21,000 ರೂಪಾಯಿಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞ ಪ್ರಣವ್ ಮೆರ್ ಅಭಿಪ್ರಾಯಪಟ್ಟಿದ್ದಾರೆ.
ಫಾರೆಕ್ಸ್ ಮಾರುಕಟ್ಟೆಯಲ್ಲಿ ಇತರ ಏಷ್ಯಾದ ಇತರ ಕರೆನ್ಸಿಗಳಿಗಿಂತ ಚೇತರಿಕೆ ಕಂಡಿದ್ದರಿಂದ, ಸ್ಥಳೀಯ ದರಗಳು ನಿಯಂತ್ರಣದಲ್ಲಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.