ಅಕ್ಟೋಬರ್ ತಿಂಗಳ ರಫ್ತು ವಹಿವಾಟಿನಲ್ಲಿ ಶೇ.21ರಷ್ಟು ಹೆಚ್ಚಳ
ನವದೆಹಲಿ, ಬುಧವಾರ, 1 ಡಿಸೆಂಬರ್ 2010( 14:47 IST )
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳ ರಫ್ತು ವಹಿವಾಟಿನಲ್ಲಿ ಶೇ.21.3ರಷ್ಟು ಏರಿಕೆಯಾಗಿ 18 ಬಿಲಿಯನ್ ಡಾಲರ್‌ಗಳ ವಹಿವಾಟು ನಡೆಸಿದೆ. ಪ್ರಸಕ್ತ ವರ್ಷದಲ್ಲಿ 200 ಬಿಲಿಯನ್ ಡಾಲರ್‌ಗಳ ವಹಿವಾಟಿನ ಗುರಿಯನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ ತಿಂಗಳ ಅವಧಿಯಲ್ಲಿ ಅಮುದು ವಹಿವಾಟಿನಲ್ಲಿ ಕೂಡಾ ಶೇ.6.8ರಷ್ಟು ಏರಿಕೆಯಾಗಿ 27.68 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ರಫ್ತು ವಹಿವಾಟಿನಲ್ಲಿ ಚೇತರಿಕೆ ಕಂಡಿದೆ. ಕಳೆದ ವರ್ಷದ ಅವಧಿಯಲ್ಲಿ ರಫ್ತು ವಹಿವಾಟು 14.8 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು. ಅಮುದು ವಹಿವಾಟು 25.9 ಬಿಲಿಯನ್ ಡಾಲರ್‌ಗಳಿಗೆ ಕುಸಿತ ಕಂಡಿತ್ತು.
ಯುರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲಿ ಚೇತರಿಕೆಯಾಗಿದ್ದರಿಂದ, ದೇಶಿಯ ಅಮುದು ಮತ್ತು ರಫ್ತು ವಹಿವಾಟಿನಲ್ಲಿ ಚೇತರಿಕೆ ಕಂಡಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.