ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅನಗತ್ಯ ಪ್ರತಿ ಕರೆ ಅಥವಾ ಸಂದೇಶಕ್ಕೆ 2.5 ಲಕ್ಷ ರೂ.ದಂಡ:ಟ್ರಾಯ್ (Telemarketers | TRAI | Endless calls | SMS | Mobile operator | DNC)
ಅನಗತ್ಯ ಪ್ರತಿ ಕರೆ ಅಥವಾ ಸಂದೇಶಕ್ಕೆ 2.5 ಲಕ್ಷ ರೂ.ದಂಡ:ಟ್ರಾಯ್
ದೆಹಲಿ, ಬುಧವಾರ, 1 ಡಿಸೆಂಬರ್ 2010( 16:30 IST )
PTI
ಟೆಲಿ ಮಾರ್ಕೆಟಿಂಗ್ ಕಂಪೆನಿಗಳ ಅನಗತ್ಯ ಕರೆಗಳು ಹಾಗೂ ಎಸ್‌ಎಂಎಸ್ ಸಂದೇಶಗಳಿಗೆ ಶೀಘ್ರದಲ್ಲಿಯೇ ಕಡಿವಾಣ ಬೀಳಲಿದೆ. ಅನಗತ್ಯ ಕರೆಗಳನ್ನು ಮಾಡುವ ಟೆಲಿಮಾರ್ಕೆಟಿಂಗ್ ಕಂಪೆನಿಗಳಿಗೆ ಪ್ರತಿ ಕರೆಗೆ ಅಥವಾ ಸಂದೇಶಕ್ಕೆ 2.5 ಲಕ್ಷ ರೂಪಾಯಿಗಳ ಭಾರಿ ದಂಡವನ್ನು ವಿಧಿಸಲು ಟ್ರಾಯ್ ಶಿಫಾರಸ್ಸು ಮಾಡಿದೆ.
ಟೆಲಿ ಮಾರ್ಕೆಟಿಂಗ್ ಕಂಪೆನಿಗಳಿಗೆ ಪ್ರತ್ಯೇಕವಾಗಿ 70 ಸೀರಿಸ್ ಸಂಖ್ಯೆಯನ್ನು ನೀಡಲಾಗುವುದು. ಟೆಲಿಮಾರ್ಕೆಟಿಂಗ್ ಕಂಪೆನಿಗಳು ಕಡ್ಡಾಯವಾಗಿ ನೋಂದಾಯಿಸಬೇಕು. ಮೊಬೈಲ್ ಬಳಕೆದಾರರೊಂದಿಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 9 ಗಂಟೆಯವರೆಗೆ ವಾಣಿಜ್ಯಿಕ ಸಂವಾದ ನಡೆಸುವಂತಿಲ್ಲ. ಸತತ ಆರು ಬಾರಿ ಟ್ರಾಯ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಪ್ಪುಪಟ್ಟಿಗೆಗೆ ಸೇರಿಸಲಾಗುವುದು ಹಾಗೂ ಆರನೇ ಬಾರಿಗೆ 2.5 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.
ಟೆಲಿಮಾರ್ಕೆಟಿಂಗ್ ಕಂಪೆನಿಗಳನ್ನು ತಡೆಯುವುದು ಹೇಗೆ:
ನಿಮ್ಮ ಮೊಬೈಲ್ ಆಪರೇಟರ್ ಕಂಪೆನಿಗೆ 1909 ಸಂಖ್ಯೆಗೆ ಕರೆ ಮಾಡಿ ಅಥವಾ ಸಂದೇಶ ರವಾನಿಸಿ ಡು-ನಾಟ್-ಕಾಲ್ ಅಥವಾ ಡು-ಕಾಲ್ ಸರ್ವಿಸ್ ಸೇವೆಗಾಗಿ ನೋಂದಾಯಿಸಿಕೊಳ್ಳಿ. ನಿಮಗೆ ಮೊಬೈಲ್ ಆಪರೇಟರ್‌ಗಳು ನೋಂದಾವಣಿ ಸಂಖ್ಯೆಯನ್ನುನೀಡಲಾಗುತ್ತದೆ.ನೋಂದಾವಣಿ ಸಂಖ್ಯೆಯಿಂದಾಗಿ ಎಲ್ಲಾ ಅನಗತ್ಯ ಕರೆಗಳನ್ನು ಅಥವಾ ಸಂದೇಶಗಳನ್ನು ತಡೆಯುವ ಅವಕಾಶವಿದೆ. ಅಥವಾ ನಿಮಗೆ ಅಗತ್ಯವಾದ ಟೆಲಿಮಾರ್ಕೆಟಿಂಗ್ ಕರೆಗಳನ್ನು ಸ್ವೀಕರಿಸಬಯಿಸಿದಲ್ಲಿ ಡು-ಕಾಲ್ ಸೇವೆಯನ್ನು ಕೂಡಾ ಆಯ್ಕೆ ಮಾಡಬಹುದಾಗಿದೆ.