ದೇಶಾದ್ಯಂತ ಬಿಎಸ್‌ಎನ್‌ಎಲ್ ಸಿಬ್ಬಂದಿಗಳ ಮುಷ್ಕರ ಹಿಂದಕ್ಕೆ
ಕೋಲ್ಕತಾ, ಶುಕ್ರವಾರ, 3 ಡಿಸೆಂಬರ್ 2010( 10:30 IST )
ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಿಬ್ಬಂದಿಗಳು ಹಮ್ಮಿಕೊಂಡಿದ್ದ ಮೂರು ದಿನದ ಮುಷ್ಕರವನ್ನು ಎರಡನೇ ದಿನಕ್ಕೆ ಹಿಂಪಡೆದಿವೆ ಎಂದು ಮೂಲಗಳು ತಿಳಿಸಿವೆ.
ಜಂಟಿ ಕಾರ್ಯಕಾರಿ ಸಮಿತಿ ನಾಯಕರು ಅಡಳಿತ ಮಂಡಳಿಯೊಂದಿಗೆ ನವದೆಹಲಿಯಲ್ಲಿ ಚರ್ಚಿಸುತ್ತಿರುವುದರಿಂದ, ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಬಿಎಸ್‌ಎನ್‌ಎಲ್ ಸಂಘಟನೆಗಳ ಮುಖಂಡ ಅನಿಮೇಶ್ ಮಿತ್ರಾ ಮಾತನಾಡಿ, ಅಡಳಿತ ಮಂಡಳಿಯೊಂದಿಗೆ ಚರ್ಚಿಸುತ್ತಿರುವುದರಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಹೂಡಿಕೆ ಹಿಂತೆಗೆತ ಮತ್ತು 9 ಮಿಲಿಯನ್ ಜಿಎಸ್‌ಎಂ ಸಂಪರ್ಕಗಳನ್ನು ಬಿಡುಗಡೆಗೊಳಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಉತ್ತರ ಮತ್ತು ಪೂರ್ವಿಯ ಭಾಗದಲ್ಲಿ 55 ಲಕ್ಷ ಮೊಬೈಲ್ ಲೈನ್‌ಗಳಿದ್ದು,ಮುಂದಿನ ವರ್ಷದ ಅವಧಿಯಲ್ಲಿ 1.5 ಕೋಟಿ ಜಿಎಸ್‌ಎಂ ಸಂಪರ್ಕಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅನಿಮೇಶ್ ಮಿತ್ರಾ ವಿವರಣೆ ನೀಡಿದ್ದಾರೆ.