ಜೆಪಿಸಿ ಸಂಪೂರ್ಣ ಸಂಸತ್ತನ್ನು ಪ್ರತಿನಿಧಿಸುವುದಿಲ್ಲ:ಸರಕಾರ
ನವದೆಹಲಿ, ಶುಕ್ರವಾರ, 3 ಡಿಸೆಂಬರ್ 2010( 12:41 IST )
2ಜಿ ತರಂಗಾಂತರ ಹಂಚಿಕೆ ಪ್ರಕರಣ ಕುರಿತಂತೆ ಜಂಟಿ ತನಿಖಾ ಸಮಿತಿಗೆ ಒಪ್ಪಿಸುವಂತೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿರುವ 37 ಪಕ್ಷಗಳಲ್ಲಿ 7 ಪಕ್ಷಗಳ ಸದಸ್ಯರು ಮಾತ್ರ ಸಮಿತಿಯಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಸಂಸತ್ತನ್ನು 37 ರಾಜಕೀಯ ಪಕ್ಷಗಳು ಪ್ರತಿನಿಧಿಸುತ್ತಿವೆ. ಆದರೆ,ಜಂಟಿ ತನಿಖಾ ಸಮಿತಿಗೆ ಸದಸ್ಯರಾಗಲು ಕೇವಲ 7 ಪಕ್ಷಗಳಿಗೆ ಮಾತ್ರ ಅವಕಾಶವಿದೆ. ಆದ್ದರಿಂದ, ಜಂಟಿ ತನಿಖಾ ಸಮಿತಿ ಸಂಪೂರ್ಣವಾಗಿ ಸಂಸತ್ತನ್ನು ಪ್ರತಿನಿಧಿಸಿದಂತಾಗುವುದಿಲ್ಲ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಚುರುಕಿನಿಂದ 2ಜಿ ತರಂಗಾಂತರ ಹಂಚಿಕೆ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ತನಿಖೆ, ಶಿಕ್ಷೆ ಮತ್ತು ನ್ಯಾಯಾಂಗ ತೀರ್ಪು ಸಂಸದೀಯ ಸಮಿತಿಯಿಂದ ಏಕಕಾಲಕ್ಕೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಗರಣ ಕುರಿತಂತೆ ಚರ್ಚಿಸಲು ಸಂಸತ್ತಿಗಿಂತ ಉತ್ತಮ ವೇದಿಕೆ ಮತ್ತೊಂದಿಲ್ಲ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ತಿಳಿಸಿದ್ದಾರೆ.