ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರ್ಗ್ ಸಂಸ್ಥೆಗೆ ಪೂರಾ ಪೈಲೆಟ್‌ ಪ್ರೊಜೆಕ್ಟ್ ಯೋಜನೆಗಳ ಗುತ್ತಿಗೆ (MARG BAGS 2 PURA PILOT PROJECTS | Tamil Nadu | Puducherry)
Bookmark and Share Feedback Print
 
ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ವೇಗವಾಗಿ ಸಾಗುತ್ತಿರುವ ಮಾರ್ಗ್ ಲಿಮಿಟೆಡ್ ಮೂಲಸೌಕರ್ಯ ಕಂಪೆನಿ, ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದೊಂದಿಗೆ, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ತಮಿಳುನಾಡು ಮತ್ತು ಪುದುಚೇರಿ ಸರಕಾರಗಳ ನೆರವಿನೊಮದಿಗೆ 2 ಪೂರಾ ಪೈಲಟ್ ಪ್ರೊಜೆಕ್ಟ್‌ಗಳಲ್ಲಿ ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಏಷ್ಯಾ ಡೆವೆಲೆಪ್‌ಮೆಂಟ್ ಬ್ಯಾಂಕ್ ತಾಂತ್ರಿಕ ನೆರವಿನೊಂದಿಗೆ ಆರ್ಥಿಕ ವ್ಯವಹಾರಗಳ ಸಚಿವಾಲಯದ ಬೆಂಬಲದೊಂಗಿಗೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ದೇಶದಲ್ಲಿ ಕಾರ್ಪೋರೇಟ್ ಕಂಪೆನಿಗಳು 9 ಬಿಡ್‌ಗಳನ್ನು ಪಡೆದಿದ್ದು, ಮಾರ್ಗ್ ಲಿಮಿಟೆಡ್ ಸಂಸ್ಥೆ 2 ಪೈಲೆಟ್ ಪ್ರೊಜೆಕ್ಟ್‌ಗಳನ್ನು ಮಡಿಲಿಗೆ ಹಾಕಿಕೊಂಡಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪೂರಾ(ಪ್ರೋವಿಜನ್ ಆಫ್ ಅರ್ಬನ್ ಅಮೆನಿಟಿಸ್ ಇನ್ ರೂರಲ್ ಏರಿಯಾಸ್)ಯೋಜನೆಯನ್ನು ಮಾಜಿ ರಾಷ್ಟ್ರಾಧ್ಯಕ್ಷರಾದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಾರಿಗೆ ತರುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ನಗರದ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಜನತೆಗೆ ವಿಸ್ತರಿಸಲು ಸಾರ್ವಜನಿಕ ಹಾಗೂ ಖಾಸಗಿ ಕಂಪೆನಿಗಳ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಿದ್ದರು.

ಯೋಜನೆಗಳ ಸದುದ್ದೇಶವನ್ನು ಅರಿತ ನಂತರ ಕೇಂದ್ರ ಸರಕಾರ, ಗ್ರಾಮೀಣ ಸಚಿವಾಲಯದ ನೆರವಿನೊಂದಿಗೆ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪೈಲೆಟ್ ಪ್ರೊಜೆಕ್ಟ್‌ಗಳನ್ನು ದೇಶದಲ್ಲಿ ಜಾರಿಗೊಳಿಸಲು ಹಸಿರು ನಿಶಾನೆ ತೋರಿತು.

ಮಾರ್ಗ್ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಿಆರ್‌ಕೆ ರೆಡ್ಡಿ ಮಾತನಾಡಿ, ಕೇಂದ್ರ ಸರಕಾರ ದೇಶದ ಗ್ರಾಮೀಣ ಭಾಗಗಳಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಸಂತಸದ ಸಂಗತಿ. ಮಾರ್ಗ್ ಸಂಸ್ಥೆ ದೇಶದ ಗ್ರಾಮೀಣ ಭಾಗಗಳಿಗೆ ಉತ್ತಮ ಸೌಕರ್ಯ ಒದಗಿಸಲಿದೆ ಎಂದು ಭರವಸೆ ನೀಡಿದರು.

ಮಾರ್ಗ್ ಸಂಸ್ಥೆಗೆ 2 ಪ್ರೊಜೆಕ್ಟ್‌ಗಳನ್ನು ವಹಿಸಲಾಗಿದ್ದು,ಕಾಂಚೀಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಪುದುಚೇರಿಯ ಕರೈಕಲ್ ಜಿಲ್ಲೆಯಲ್ಲಿ ಮತ್ತೊಂದು ಯೋಜನೆ ಜಾರಿಯಲ್ಲಿದೆ.ಯೋಜನೆಗಳಿಂದಾಗಿ ಒಂದು ಲಕ್ಷ ಜನರಿಗೆ ಲಾಭವಾಗಲಿದೆ. ಪ್ರೊಜೆಕ್ಟ್ ವೆಚ್ಚ 170 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ