ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಂಬಂಧಿಕರನ್ನು ಕಂಪನಿಗಳು ಹತ್ತಿರ ಸೇರಿಸಲ್ಲ: ಅಧ್ಯಯನ (Employ | HR experts | Family problems | India)
Bookmark and Share Feedback Print
 
ನಿಮ್ಮ ಸಂಬಂಧಿಕರೊಬ್ಬರು ಉದ್ಯೋಗಿಯಾಗಿರುವ ಕಂಪನಿಯಲ್ಲಿ ತಾವೂ ಉದ್ಯೋಗವನ್ನು ಬಯಸುತ್ತಿದ್ದೀರಾ? ಹಾಗಿದ್ದರೆ ಆ ಆಸೆಯನ್ನು ಬಿಟ್ಟು ಬಿಡಿ. ನಿಮ್ಮ ಅರ್ಜಿಯನ್ನು ಕಂಪನಿಯು ಪರಿಗಣಿಸುವ ಸಾಧ್ಯತೆ ಕಡಿಮೆ. ಹೀಗೆಂದು ಹೇಳಿರುವುದು ಮಾನವ ಸಂಪನ್ಮೂಲ ತಜ್ಞರು. ಈ ಸಂಬಂಧ ಅಧ್ಯಯನ ನಡೆಸಿದ ನಂತರ ಇಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಹುತೇಕ ಎಲ್ಲಾ ಕ್ಷೇತ್ರಗಳ ಭಾಗಶಃ ಕಂಪನಿಗಳು ಅಥವಾ ಕೆಲವು ಕಂಪನಿಗಳು ಇಂತಹ ನೀತಿಯನ್ನು ಹೊಂದಿವೆ. ಉದ್ಯೋಗಿಯೊಬ್ಬನ ಅಥವಾ ಒಬ್ಬಳ ಸಂಬಂಧಿಕರನ್ನು ಅದೇ ಕಂಪನಿಗೆ ನೇಮಕಗೊಳಿಸುವುದನ್ನು ಅವುಗಳು ವಿರೋಧಿಸುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

ಉದ್ಯೋಗಿಗಳ ಖಾಸಗಿ ಜೀವನ ಮತ್ತು ವೃತ್ತಿ ಜೀವನವನ್ನು ಸಮ್ಮಿಳಿತಗೊಳಿಸಲು ಕಂಪನಿಗಳು ಬಯಸುವ ಸಾಧ್ಯತೆ ಕಡಿಮೆ. ಇದರಿಂದ ಕಂಪನಿಗೆ ತೊಂದರೆಯಾಗಬಹುದು, ಕೌಟುಂಬಿಕ ಸಮಸ್ಯೆಗಳು ಅಥವಾ ವಿರಸಗಳು ಕೆಲಸದ ಮೇಲೆ ಅಥವಾ ಕಚೇರಿಯ ವಾತಾವರಣದ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವುದೇ ಕಂಪನಿಗಳ ಭೀತಿ.

ಅಲ್ಲದೆ ಕೌಟುಂಬಿಕ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತಹ ಪ್ರಸಂಗಗಳು ನಡೆದಾಗ ಅದು ಕಂಪನಿಯ ಮೇಲೆ ಹೊರೆಯಾಗುತ್ತದೆ. ಹಲವು ವಿಚಾರಗಳಲ್ಲಿ ಇಂತಹ ಸಮಸ್ಯೆಗಳು ಬಂದಾಗ ಜಟಿಲ ಪರಿಸ್ಥಿತಿ ಕಾಣಬಹುದು ಎಂದು ಈ ಕ್ಷೇತ್ರದ ತಜ್ಞರು ಹೇಳಿದ್ದಾರೆ.

ಕೆಲವು ಕಂಪನಿಗಳಲ್ಲಿ ಈ ನಿರ್ಬಂಧಗಳು ಸೀಮಿತವಾಗಿವೆ. ಅಂದರೆ ಉದ್ಯೋಗಿಯ ರಕ್ತ ಸಂಬಂಧಿಗಳೆನಿಸುವ ಪತಿ-ಪತ್ನಿ ಅಥವಾ ಸಹೋದರ-ಸಹೋದರಿಯನ್ನು ನೇಮಕ ಮಾಡಿಕೊಳ್ಳದಂತೆ ನಿಯಮಾವಳಿಗಳನ್ನು ರೂಪಿಸಿಕೊಂಡಿರುತ್ತವೆ.

ಸಂಬಂಧಿಕರನ್ನು ಒಂದೇ ಕಂಪನಿಗೆ ನೇಮಕಗೊಳಿಸುವುದರಿಂದ ಸ್ವಜನ ಪಕ್ಷಪಾತ ಮತ್ತು ನೈತಿಕತೆ ವಿಚಾರದಲ್ಲಿ ಸಂಘರ್ಷ ಮತ್ತು ಸಮಸ್ಯೆಗಳು ತಲೆದೋರಬಹುದು. ವೈಯಕ್ತಿಕ ವಿಚಾರಗಳು ಕಚೇರಿಯ ಕೆಲಸದಲ್ಲಿ ಅಡ್ಡಗೋಡೆಯಾಗಬಹುದು. ಒಟ್ಟಾರೆ ಇದರಿಂದ ತೊಂದರೆಗೊಳಗಾಗುವುದು ಕಂಪನಿ ಎಂದು ಅಭಿಪ್ರಾಯಪಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ