ದ.ಆಫ್ರಿಕಾ: ಶ್ರೀಮಂತ ಉದ್ಯಮಿಗಳಲ್ಲಿ ಮಿತ್ತಲ್‌ಗೆ ಅಗ್ರಸ್ಥಾನ
ಜೋಹಾನ್ಸ್ಬರ್ಗ್, ಸೋಮವಾರ, 6 ಡಿಸೆಂಬರ್ 2010( 13:16 IST )
PTI
ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯು ಭಾರತದ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್, ಸತತ ಆರನೇ ಬಾರಿಗೆ ದಕ್ಷಿಣ ಆಫ್ರಿಕಾದ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಸಂಡೇ ಟೈಮ್ಸ್ ದಕ್ಷಿಣ ಆಫ್ರಿಕಾದ 100 ಶ್ರೀಮಂತ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ದಕ್ಷಿಣ ಆಫ್ರಿಕಾದಲ್ಲಿ ವಾಸಿಸದ ಹೊರತಾಗಿಯೂ ಮಿತ್ತಲ್ ಅಗ್ರಸ್ಥಾನವನ್ನು ಪಡೆದಿದ್ದಾರೆ.
ಭಾರತೀಯ ಸಂಜಾತ ಮಿತ್ತಲ್, ಅರ್ಸೆಲ್ಲರ್ -ಮಿತ್ತಲ್‌ನಲ್ಲಿ 3.4 ಬಿಲಿಯನ್ ಡಾಲರ್‌ಗಳ ಹೂಡಿಕೆಯೊಂದಿಗೆ, ಮೊದಲ ಸ್ಥಾನಪಡೆದಿದ್ದಾರೆ.ದಕ್ಷಿಣ ಆಫ್ರಿಕಾದ ಇತರ ಮೂವರು ಶ್ರೀಮಂತ ಉದ್ಯಮಿಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.