ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್, ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಮಾಡೆಲ್ ಕಾರುಗಳ ದರಗಳಲ್ಲಿ ಜನೆವರಿಯಿಂದ ಶೇ.2 ರಷ್ಟು ದರ ಏರಿಕೆ ಘೋಷಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಾರುಗಳ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ, ಮುಂಬರುವ ಜನೆವರಿಯಿಂದ ಶೇ1.5-2ರಷ್ಟು ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಹುಂಡೆ ಮೋಟಾರ್ ಇಂಡಿಯಾ ಲಿಮಿಟೆಡ್ ನಿರ್ದೇಶಕ (ಮಾರಾಟ ಮತ್ತು ಮಾರುಕಟ್ಟೆ) ಅರವಿಂದ್ ಸೆಕ್ಸೆನಾ ಹೇಳಿದ್ದಾರೆ.
ಸ್ಯಾಂಟ್ರೋ, ಐ10 ಮತ್ತು ಐ20 ಹಾಗೂ ಸೆಡಾನ್ ಆಸೆಂಟ್ ಸೇರಿದಂತೆ ಇತರ ಮಾಡೆಲ್‌ಗಳ ಕಾರುಗಳ ದರಗಳಲ್ಲಿ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜನರಲ್ ಮೋಟಾರ್ಸ್ ಸಂಸ್ಥೆ, ಜನೆವರಿಯಿಂದ ವಿವಿಧ ಮಾಡೆಲ್‌ಗಳ ದರಗಳಲ್ಲಿ ಶೇ.2.5ರಷ್ಟು ಹೆಚ್ಚಳವಾಗಲಿದೆ ಎಂದು ಘೋಷಿಸಿದ ಕೆಲ ದಿನಗಳಲ್ಲಿ ಹೊಂಡಾ ಮೋಟಾರ್ಸ್ ದರ ಏರಿಕೆ ಘೋಷಣೆ ಹೊರಬಿದ್ದಿದೆ.