ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪರಮಾಣು ಘಟಕ:ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹಸ್ತಾಕ್ಷರ (Nuclear Power Corp | Nicolas sarkozy | Manmohan Singh | Indo-French nuke)
Bookmark and Share Feedback Print
 
ದೇಶದಲ್ಲಿ ಎರಡು ಪರಮಾಣು ಘಟಕಗಳ ಸ್ಥಾಪನೆ ಕುರಿತಂತೆ, ಭಾರತ ಮತ್ತು ಫ್ರಾನ್ಸ್ ಬಹುಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿಹಾಕಿವೆ ಎಂದು ಮೂಲಗಳು ತಿಳಿಸಿವೆ.

ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೊಜಿ ತಮ್ಮ ಪತ್ನಿಯೊಂದಿಗೆ ನಾಲ್ಕು ದಿನಗಳ ಕಾಲ ಭಾರತದ ಪ್ರವಾಸದಲ್ಲಿದ್ದು, ಉಭಯ ದೇಶಗಳ ನಡುವಣ ವಹಿವಾಟು ವೃದ್ಧಿಗೆ ಆಸಕ್ತರಾಗಿದ್ದಾರೆ.

ಫ್ರಾನ್ಸ್‌ನ ಪ್ರಮುಖ ಅಣುಸ್ಥಾವರ ನಿರ್ಮಾಣ ಕಂಪೆನಿಯಾದ ಅರೆವಾ ಎಸ್‌ಎ, ಮಹಾರಾಷ್ಟ್ರದ ಜೈಟಾಪುರ್‌ನಲ್ಲಿ 1,650 ಮೆಗಾವ್ಯಾಟ್‌‌ನ ಎರಡು ಪರಮಾಣು ಘಟಕಗಳನ್ನು ನಿರ್ಮಿಸಲಿದೆ.

ಸರ್ಕೊಜಿ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಸಮ್ಮುಖದಲ್ಲಿ, ಎರಡು ಪರಮಾಣ ಘಟಕಗಳ ನಿರ್ಮಾಣಕ್ಕೆ 9.3 ಬಿಲಿಯನ್ ಡಾಲರ್‌ಗಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಬೇಡಿಕೆಯನ್ನು ನೀಗಿಸಲು ದೇಶದಲ್ಲಿ ಒಟ್ಟು 20 ಪರಮಾಣು ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಆರಂಭಿಕವಾಗಿ 2 ಪರಮಾಣು ಘಟಕಗಳನ್ನು ನಿರ್ಮಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ