ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಸ್‌ಬಿಐನಿಂದ ಸ್ಥಿರ ಠೇವಣಿ ಬಡ್ಡಿ ದರ ಹೆಚ್ಚಳ ಘೋಷಣೆ (SBI | hikes | Deposit rates | Basis pts | ICICI Bank | Punjab National Bank)
Bookmark and Share Feedback Print
 
ಸಾರ್ವಜನಿಕ ಕ್ಷೇತ್ರದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ವಿವಿಧ ಠೇವಣಿಗಳ ಬಡ್ಡಿ ದರಗಳಲ್ಲಿ ಶೇ.1.5ರಷ್ಟು ಹೆಚ್ಚಳಗೊಳಿಸಿ ಆದೇಶ ಹೊರಡಿಸಿದ್ದು ನಾಳೆಯಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ,ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ ಘೋಷಿಸಿದ ಹಿನ್ನೆಲೆಯಲ್ಲಿ, ಎಸ್‌ಬಿಐ ಕೂಡಾ ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ ಹೆಚ್ಚಳಗೊಳಿಸಿದೆ.

ಸ್ಥಿರ ಠೇವಣಿದಾರರಿಗೆ ಉತ್ತಮ ಬಡ್ಡಿ ದರವನ್ನು ನೀಡುವಂತೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥ ಡಿ.ಸುಬ್ಬಾರಾವ್ ಬ್ಯಾಂಕ್‌ಗಳಿಗೆ ಸಲಹೆಗಳನ್ನು ನೀಡಿರುವುದನ್ನು ಸ್ಮರಿಸಬಹುದು.

ಎಸ್‌ಬಿಐ ಅಧಿಕೃತ ಪ್ರಕಟಣೆಯ ಪ್ರಕಾರ, 8-10 ವರ್ಷಗಳ ಅವಧಿಯ ಠೇವಣಿಗೆ ಬಡ್ಡಿ ದರದಲ್ಲಿ ಶೇ.1ರಷ್ಟು ಹೆಚ್ಚಳಗೊಳಿಸಿ ಶೇ.8.75ರಷ್ಟು ಬಡ್ಡಿ ದರ ನಿಗದಿಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ