2012ರೊಳಗೆ ಫ್ರಾನ್ಸ್ 10 ಬಿಲಿಯನ್ ಡಾಲರ್ ಹೂಡಿಕೆ:ಫ್ರಾನ್ಸ್
ನವದೆಹಲಿ, ಸೋಮವಾರ, 6 ಡಿಸೆಂಬರ್ 2010( 17:11 IST )
ಫ್ರೆಂಚ್ ಕಂಪೆನಿಗಳು ಭಾರತದಲ್ಲಿ ಹೂಡಿಕೆಗಾಗಿ ಆಸಕ್ತಿಯನ್ನು ತೋರಿದ್ದು, ಮುಂಬರುವ 2012ರೊಳಗೆ 10 ಬಿಲಿಯನ್ ಡಾಲರ್ ಹೂಡಿಕೆಗೆ ಬದ್ಧವಾಗಿವೆ ಎಂದು ಫ್ರಾನ್ಸ್‌ನ ಆರ್ಥಿಕ ಮತ್ತು ಹಣಕಾಸು ಸಚಿವ ಕ್ರಿಸ್ಟಿನೆ ಲಗಾರ್ಡೆ ಹೇಳಿದ್ದಾರೆ.
10 ಬಿಲಿಯನ್ ಡಾಲರ್ ಹೂಡಿಕೆ ಕೇವಲ ಅಂಕಿ ಸಂಖ್ಯೆಗಳಲ್ಲ. 2008-2012ರ ವರೆಗಿನ ಫ್ರಾನ್ಸ್ ಕಂಪೆನಿಗಳು ಹೂಡಿಕೆಗಾಗಿ ಮಾಡಿಕೊಂಡ ಬದ್ಧತೆ ಎಂದು ಲಗಾರ್ಡೆ, ಇಂಡಿಯಾ-ಫ್ರಾನ್ಸ್ ಬಿಜಿನೆಸ್ ಫೋರಂ ವೇದಿಕೆಯಲ್ಲಿ ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವಣ ವಹಿವಾಟು ಕೊಟ್ಟು ತೊಗೊಳ್ಳೊ ವಹಿವಾಟಿನಂತೆ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಉಭಯ ರಾಷ್ಟ್ರಗಳಿಗೆ ಲಾಭವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಿಟೇಲ್, ವಿಮಾಕ್ಷೇತ್ರ ಮತ್ತು ಮಲ್ಟಿ ಬ್ರಾಂಡ್ ರಿಟೇಲ್ ಕ್ಷೇತ್ರಗಳಲ್ಲಿ ಫ್ರಾನ್ಸ್ ಕಂಪೆನಿಗಳು ಹೂಡಿಕೆ ಮಾಡಲು ಬಯಸುತ್ತವೆ ಎಂದು ತಿಳಿಸಿದ್ದಾರೆ.