ಭಾರತದ ಆರ್ಥಿಕ ವೃದ್ಧಿ ದರ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.9ಕ್ಕೆ ತಲುಪಲಿದೆ. ವರ್ಷಾಂತ್ಯತಕ್ಕೆ ಹಣದುಬ್ಬರ ದರ ದ್ವಿಗುಣವಾಗುವ ಸಾಧ್ಯತೆಗಳಿವೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಜಾಗತಿಕ ಆರ್ಥಿಕ ಕುಸಿತದಿಂದ ಚೇತರಿಕೆ ಕಂಡ ದೇಶದ ಆರ್ಥಿಕತೆ ವೇಗವಾಗಿ ಸಾಗುತ್ತಿದೆ. ಹಣದುಬ್ಬರ ದರ ಏರಿಕೆಯನ್ನು ನಿಯಂತ್ರಿಸಲು ಆರ್‌ಬಿಐ ಆರು ಬಾರಿ ರೆಪೋ ದರಗಳನ್ನು ಹೆಚ್ಚಿಸಿದೆ.
ಮಾರ್ಚ್ 2011ರ ಮುಕ್ತಾಯಕ್ಕೆ ದೇಶದ ಹಣದುಬ್ಬರ ದರ ಶೇ.8.98ಕ್ಕೆ ತಲುಪುವ ಸಾಧ್ಯತೆಗಳಿವೆ.ಆರ್ಥಿಕ ವೃದ್ಧಿ ದರ ಶೇ.9ಕ್ಕೆ ತಲುಪುವ ವಿಶ್ವಾಸವಿದೆ ಎಂದು ಮೂಲಗಳು ತಿಳಿಸಿವೆ.
ಸರಾಸರಿ ಆಹಾರ ಹಣದುಬ್ಬರ ಪ್ರಸಕ್ತ ವರ್ಷಾಂತ್ಯಕ್ಕೆ ಶೇ.19.95ಕ್ಕೆ ತಲುಪಲಿದೆ. ಕಳೆದ ವರ್ಷದ ಅವಧಿಯಲ್ಲಿ ಜಿಡಿಪಿ ದರ ಶೇ.7.4ಕ್ಕೆ ತಲುಪಿತ್ತು ಎಂದು ಅಧಿಕಾರಕ್ಕೆ ತಿಳಿಸಿದ್ದಾರೆ.