ಚಿನಿವಾರಪೇಟೆಯಲ್ಲಿ ಚಿನ್ನ, ಬೆಳ್ಳಿಯ ದರಗಳ ಏರಿಕೆ ಕೋಲಾಹಲ ಸೃಷ್ಟಿಸಿದೆ. ಬೆಳ್ಳಿ ಪ್ರತಿ ಕೆಜಿಗೆ 46 ಸಾವಿರ ರೂಪಾಯಿಗಳ ಗಡಿಯನ್ನು ದಾಟಿದೆ. ಮಾರುಕಟ್ಟೆಗಳಲ್ಲಿ ಚಿನ್ನದ ದರ ದಾಖಲೆಯ ಏರಿಕೆ ಕಂಡಿದೆ.
ಮದುವೆ ಸೀಜನ್ ಹಿನ್ನೆಲೆಯಲ್ಲಿ, ಚಿನ್ನ ಮತ್ತು ಬೆಳ್ಳಿಯ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 9.90 ಡಾಲರ್‌ಗಳ ಏರಿಕೆಯಾಗಿ 1,416.10 ಡಾಲರ್‌ಗಳಿಗೆ ತಲುಪಿದೆ. ಬೆಳ್ಳಿಯ ದರ ಕೂಡಾ ಪ್ರತಿ ಔನ್ಸ್‌ಗೆ 46 ಸೆಂಟ್‌ಗಳ ಏರಿಕೆ ಕಂಡು 29.73 ಡಾಲರ್‌ಗಳಿಗೆ ತಲುಪಿದೆ.
ಬೆಳ್ಳಿಯ ದರ ಇಂದಿನ ವಹಿವಾಟಿನಲ್ಲಿ ,ಪ್ರತಿ ಕೆಜಿಗೆ 340 ರೂಪಾಯಿಗಳ ಏರಿಕೆಯಾಗಿ 46,005 ರೂಪಾಯಿಗಳಿಗೆ ತಲುಪಿದೆ.
ಚಿನ್ನದ ದರ, ಇಂದಿನ ಆರಂಭಿಕ ವಹಿವಾಟಿನಲ್ಲಿ, ಪ್ರತಿ 10 ಗ್ರಾಂಗೆ 60 ರೂಪಾಯಿಗಳಷ್ಟು ಏರಿಕೆಯಾಗಿ 20,765 ರೂಪಾಯಿಗಳಿಗೆ ಏರಿಕೆ ಕಂಡಿದೆ.