ದೇಶದ ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್, ಮುಂಬರುವ 2014ರೊಳಗೆ ಗ್ರಾಹಕರ ಸಂಖ್ಯೆಯಲ್ಲಿ 10 ಪಟ್ಟು ಹೆಚ್ಚಿಸುವ ಮೂಲಕ 100 ಮಿಲಿಯನ್ ಗ್ರಾಹಕರ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ದೇಶದಲ್ಲಿ 10.29 ಮಿಲಿಯನ್ ಗ್ರಾಹರನ್ನು ಹೊಂದಲಾಗಿದೆ. ಮುಂಬರುವ 2014ರೊಳಗೆ 100 ಮಿಲಿಯನ್ ಗ್ರಾಹಕರ ಗುರಿಯನ್ನು ಹೊಂದಲಾಗಿದೆ ಎಂದು ಟ್ರಾಯ್ ಮುಖ್ಯಸ್ಥ ಜೆ.ಎಸ್.ಶರ್ಮಾ ಹೇಳಿದ್ದಾರೆ.
ನ್ಯಾಷನಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಯೋಜನೆಗೆ ಮುಂದಿನ ಒಂದೆರಡು ದಿನಗಳಲ್ಲಿ ಶಿಪಾರಸ್ಸುಗಳನ್ನು ನೀಡಲಾಗುವುದು. ವಿಎಎಸ್ ಸೇವೆಗಳಿಗೆ ಪರವಾನಿಗಿ ನೀಡುವ ಯೋಜನೆಗಳನ್ನು ಹೊಂದಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಇತರ ಕಂಪೆನಿಗಳ ದರ ಸಮರದ ಕೊರತೆಯಿಂದಾಗಿ ಹೆಚ್ಚಳವಾಗಿದೆ ಎಂದು ಟ್ರಾಯ್ ಮುಖ್ಯಸ್ಥ ಜೆ.ಎಸ್.ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.